ಲಿಂಗಸಗೂರು: ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ( ರಕ್ತ ಸುರಕ್ಷತೆ) ರಾಯಚೂರು, ಭಾರತೀಯ ವೈದ್ಯಕೀಯ ಸಂಘ (ರಿ) ಲಿಂಗಸಗೂರು ಮತ್ತು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ರಕ್ತ ಭಂಡಾರ ಇವರ ಸಂಯುಕ್ತಾಶ್ರಯದಲ್ಲಿ, ಏಪ್ರಿಲ್ 01 ರಂದು ಜೆ ಡಿ ಎಸ್ ಮುಖಂಡರಾದ ಸಿದ್ದು ವಾಯ್ ಬಂಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಲಿಂಗಸಗೂರು ಪಟ್ಟಣದ ಜೆ ಡಿ ಎಸ್ ಕಾರ್ಯಲಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜೆ ಡಿ ಎಸ್ ತಾಲೂಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ತಾಲೂಕ ಸಿದ್ದು ವಾಯ್ ಬಂಡಿ ಅಭಿಮಾನಿಗಳ ಬಳಗ, ಲಿಂಗಸಗೂರು ಆಯೋಜಿಸಿದೆ.
