ವರದಿಗಾರರು:ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಪಟ್ಟಣದ ಆರ್ ಎಸ್ ಎಸ್ ಕಾರ್ಯಕರ್ತರು ಲಾಕ್ ಡೌನ್ ಆದಾಗಿನಿಂದ ಒಂದಲ್ಲಾ ಒಂದು ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಇವರು, ಇತ್ತಿಚಿಗೆ ಪಟ್ಟಣದ ಠಾಣೆಗೆ ತೆರಳಿ, ಪೊಲೀಸ್ ಸಿಬ್ಬಂದಿಯವರಿಗೆ ಕೋವಿಡ್-19 ಮುಂಜಾಗ್ರತೆ ಹಾಗೂ ಲಾಕ್ ಡೌನ್ ಬಂದೋಬಸ್ತ್ ಕಾರ್ಯನಿರ್ವಹಿಸುವಿಕೆಯಲ್ಲಿನ ಕಾರ್ಯಕ್ಕೆ ಕೃತಜ್ಞತಾಪೂರ್ವಕವಾಗಿ ಸ್ಯಾನಿಟೈಸರ್ ಕಿಟ್ ಗಳನ್ನು ವಿತರಿಸಿದರು.
“ರಾಯಚೂರು ಜಿಲ್ಲೆ ಮತ್ತು ಲಿಂಗಸಗೂರು ತಾಲೂಕು ಗ್ರೀನ್ ಝೋನ್ ನಲ್ಲಿರುವುದಕ್ಕೆ ಕಾರಣ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕಾರ್ಯಗಳೆ ಪೂರಕ, ಹಾಗಾಗಿ ಇವರಲ್ಲಿ ಪೊಲೀಸ್ ಸಿಬ್ಬಂದಿಯ ಕಾರ್ಯವೂ ಪ್ರಮುಖವಾದದ್ದು, ತಾಲೂಕಿನ ಮತ್ತು ಪಟ್ಟಣದ ಸಾರ್ವಜನಿಕರನ್ನು ಸಾಂಕ್ರಾಮಿಕತೆಯಿಂದ ತಡೆಯಲು ಪೊಲೀಸ್ ಸಿಬ್ಬಂದಿಯು ಹಗಲಿರುಳೆನ್ನದೇ, ಬಿಸಿಲ್ಲೆನ್ನದೇ ತಮ್ಮ ಕುಟುಂಬದೊಂದಿಗೆ ಹಲವಾರು ದಿನ-ಗಂಟೆಗಳ ಕಾಲ ದೂರ ಉಳಿದು ನಮ್ಮನ್ನು ಹಾಗೂ ಪಟ್ಟಣದ ಜನರನ್ನು ಸೂಕ್ಷ್ಮವಾಗಿ ತಿಳಿಹೇಳಿ, ಮಾತು ಕೇಳದವರಿಗೆ ಒಲ್ಲದ ಮನಸ್ಸಿನಿಂದ ಲಾಠಿ ರುಚಿ ತೋರಿಸಿ, ಬ್ಯಾರಿಕೇಡ್ಸ್ ಅಳವಡಿಸಿ, ಅನಾವಶ್ಯಕವಾಗಿ ತಿರುಗಾಡುವವರ ಬೈಕುಗಳನ್ನು ವಶಕ್ಕೆ ಪಡೆದು, ಕಾನೂನುಬಾಹಿರವಾದ ಮದ್ಯ ಮಾರಾಟವನ್ನು ಪತ್ತೆಹಚ್ಚಿ, ಪಟ್ಟಣದ ನಾಗರಿಕರನ್ನು ರಕ್ಷಿಸುತ್ತಿದ್ದಾರೆ, ಇವರ ಮುಂಜಾಗ್ರತಾ ಕಾರ್ಯಕ್ಕೆ ಎಷ್ಟು ಕೃತಜ್ಷತೆ ಸಲ್ಲಿಸಿದರೂ ಸಾಲದು” ಎಂದು ಮಾತನಾಡಿದ ಆರ್ ಎಸ್ ಎಸ್ ಘಟಕದ ಪಾಂಡುರಂಗ ಆಪ್ಟೆ, ತಮ್ಮ ಇತರ ಕಾರ್ಯಕರ್ತರೊಂದಿಗೆ , ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್‍ಐ ಪ್ರಕಾಶರೆಡ್ಡಿ ಮತ್ತು ಠಾಣೆಯ ಇತರ ಸಿಬ್ಬಂದಿಯವರಿಗೆ ಕೃತಜ್ಞತೆ-ಧನ್ಯವಾದ ಸೂಚಿಸಿ ಸ್ಯಾನಿಟೈಸರ್ ಕಿಟ್‌ಗಳನ್ನು ವಿತರಿಸಿದರು.
ಈ ವಿತರಣಾ ಕಾರ್ಯದಲ್ಲಿ ಚನ್ನಬಸವ ಹಿರೇಮಠ, ಪರುಶುರಾಮ ಸಾವಜಿ, ಅಮರೇಶ ಚೆನ್ನಿ, ಅನಂತದಾಸ್, ಕುಷವಂತ್, ಸೋಮಶೇಖರ್, ಅಜಯ ಕುಮಾರ ಶಿವಂಗಿ, ವಿಕ್ರಮ, ನರಸಿಂಹ, ಸೋಮಶೇಖರ್ ನಾಯಕ್, ಶ್ರೀಕಾಂತ ಪಲ್ಲೇದ, ಸುಧಾಕರ, ಕಿರಣ ಪಲ್ಲೇದ, ಜಗದೀಶ, ಅಜಯ,ಅಮೀತ್ ಮೆಹತಾ, ಹಾಗೂ ಇತರರು ತೊಡಗಿದ್ದರು.