*ಲಾಕ್ ಡೌನ್ ದಿನದಿಂದ ಅಗತ್ಯ ಸಾಮಾಗ್ರಿ–ಅಲ್ಪಾಹಾರ ವಿತರಣೆಯಲ್ಲಿ ತೊಡಗಿಕೊಂಡಿರುವ ಆರ್ ಎಸ್ ಎಸ್ .
*ಇಂದು ಸ್ಥಳಿಯ ಪೌರ ಕಾರ್ಮಿಕರಿಗೆ ಅಭಿನಂದನೆಯೊಂದಿಗೆ ಸ್ಯಾನಿಟೈಸರ್ ವಿತರಣೆ.
ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು
ಲಿಂಗಸಗೂರು: ಇಂದು ಬೆಳಿಗ್ಗೆ ಸ್ಥಳಿಯ ಪುರಸಭೆ ವ್ಯಾಪ್ತಿಯ ಎಲ್ಲಾ ಪೌರ ಕಾರ್ಮಿಕರಿಗೆ, ಆರ್ ಎಸ್ ಎಸ್ ಕಾರ್ಯಕರ್ತರು ಪುರಸಭೆಗೆ ತೆರಳಿ ಅವರು ಸಲ್ಲಿಸುತ್ತಿರುವ ಸೇವೆಗೆ ಕೃತಜ್ಞತಾ ಪೂರ್ವಕವಾಗಿ ಎಲ್ಲರಿಗೂ ಸ್ಯಾನಿಟೈಸರ್ ವಿತರಿಸಿದರು.
ಕೋವಿಡ್- 19 ಸಾಂಕ್ರಾಮಿಕತೆ ತಡೆಗಟ್ಟುವಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಹಾಗೂ ತಾಲೂಕ ಆಡಳಿತ, ವೈದ್ಯಕೀಯ ಅಧಿಕಾರಿ-ಸಿಬ್ಬಂದಿ, ಪೊಲೀಸ್ ಇಲಾಖೆ, ಪುರಸಭೆ ಇಲಾಖೆ, ಪೌರ ಕಾರ್ಮಿಕರ ಕಾರ್ಯದಿಂದಾಗಿ ನಮ್ಮ ಜಿಲ್ಲೆ ಮತ್ತು ತಾಲೂಕು ಸಾಂಕ್ರಾಮಿಕತೆಯಿಂದ ಸುರಕ್ಷಿತವಾಗಿದೆ ಎಂಬ ಕಾರ್ಯ ಶ್ಲಾಘನೆಯೊಂದಿಗೆ, ನೆರೆದಿದ್ದ ಪೌರಕಾರ್ಮಿಕರಿಗೆ “ತಾವು ಸ್ವಚ್ಛತಾ ಕೆಲಸದಲ್ಲಿದ್ದಾಗ ಮುಂಜಾಗ್ರತೆಗೊಸ್ಕರ ಸ್ಯಾನಿಟೈಸರಿನಿಂದ ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಇದನ್ನು ಉಪಯೊಗಿಸಿದ ನಂತರ ಬೆಂಕಿ ಇಂದ ದೂರ ಇರಿ, ಸ್ಯಾನಿಟೈಸರನ್ನು ಚಿಕ್ಕ ಮಕ್ಕಳಿಂದ ದೂರ ಇಡಿ, ಕಣ್ಣಿನ ಸಂಪರ್ಕಕ್ಕೆ ತರಬೇಡಿ” ಎಂದು ತಿಳಿಸಿ, ಅವರ ಮಾಡುವ ಪಟ್ಟಣ ಸ್ವಚ್ಚತಾ ಕಾರ್ಯಕ್ಕೆ ಧನ್ಯವಾದ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಸಿಬ್ಬಂದಿ ಶಿವಲಿಂಗ ಮೇಗಳಮನಿ, ಮತ್ತು ಸಹ ಸಿಬ್ಬಂದಿಯಾದ ಮಲ್ಲಿಕಾರ್ಜುನ ಜೊತೆ ಇತರರು ಹಾಜರಿದ್ದರು.
ಆರ್ ಎಸ್ ಎಸ್ ನ ಪಾಂಡುರಂಗ ಆಪ್ಟೆ, ಚನ್ನಬಸವ ಹಿರೇಮಠ, ಪರುಶುರಾಮ ಸಾವಜಿ, ಅಮರೇಶ ಚೆನ್ನಿ, ಅನಂತದಾಸ್, ಕುಷವಂತ್, ಸೋಮಶೇಖರ್, ಅಜಯ ಕುಮಾರ ಶಿವಂಗಿ, ವಿಕ್ರಮ, ನರಸಿಂಹ, ಸೋಮಶೇಖರ್ ನಾಯಕ್, ಶ್ರೀಕಾಂತ ಪಲ್ಲೇದ, ಸುಧಾಕರ, ಕಿರಣ ಪಲ್ಲೇದ, ಜಗದೀಶ, ಅಜಯ,ಅಮೀತ್ ಮೆಹತಾ, ಹಾಗೂ ಹಲವರು ವಿತರಣಾ ಕಾರ್ಯದಲ್ಲಿದ್ದರು.