ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ತಾಲೂಕ ಘಟಕದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈಧ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು , ಭಾರತೀಯ ಮಜ್ದೂರ್ ಸಂಘದೊಂದಿಗೆ ಸಂಯೊಜಿತವಾಗಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾ ರ್ಯಾಲಿಯನ್ನು ಶನಿವಾರ ಹಮ್ಮಿಕೊಂಡಿತ್ತು.


ಪ್ರಮುಖವಾಗಿ, ಕೋವಿಡ್-19 ಸಂದರ್ಭದಲ್ಲಿಯೂ ತಮ್ಮ ಪ್ರಾಣದ ಹಂಗು ತೊರೆದು 200 ಕ್ಕೂ ಹೆಚ್ಚು ಇಲಾಖೆಯ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರು ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ತಿಳಿಸುತ್ತಾ, ಈ ಹಿಂದೆ ಕರ್ತವ್ಯ ನಿರ್ವಹಣಾ ಸಮಯದಲ್ಲಿ ಮರಣ ಹೊಂದಿದ ಸಿಬ್ಬಂದಿಗೆ ಕನಿಷ್ಟ ಸೌಲಭ್ಯದ ತಾರತಮ್ಯ ಹೋಗಲಾಡಿಸಬೇಕು, ವೇತನ ತಾರತಮ್ಯ ಹೋಗಲಾಡಿಸಬೇಕು, ಇಲಾಖೆಗೆ ಸಂಬಂಧಸಿದಂತೆ ಬಜೆಟ್ ಶೇಕಡಾವಾರು ಹೆಚ್ಚಿಸಬೇಕು, ಏಕ ರೂಪದ ವೇತನ ಜಾರಿ, ಬೋನಸ್ ಹೆಚ್ಚಳ, ನೇಮಕಾತಿ ಮಯೋಮಿತಿಯ ಹೆಚ್ಚಳ, ವರ್ಗಾವಣೆ ಕುರಿತಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿಯನ್ನು ಕೈಗೊಂಡು, ತಮ್ಮ ಮನವಿ ಪತ್ರದಲ್ಲಿನ ಬೇಡಿಕೆಗಳನ್ನು ತಿಳಿಸುತ್ತಾ, ಕ.ರಾ.ಆ.ಗು.ಹೊ.ನೌ. ಸಂಘದ ರಾಜ್ಯಾಧ್ಯಕ್ಷರಾದ ವಿಶ್ವಾರಾಧ್ಯ ಎಚ್. ವೈ. ಸಹಿಯ ಮನವಿ ಪತ್ರವನ್ನು, ಸಹಾಯಕ ಆಯುಕ್ತರು ಹಾಗೂ ದಂಡಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾ ರ್ಯಾಲಿ ಮತ್ತು ಮನವಿ ಪತ್ರ ಸಲ್ಲುವಿಕೆಯ ಪ್ರಕ್ರಿಯೆಯಲ್ಲಿ ತಾಲೂಕ ಅಧ್ಯಕ್ಷರಾದ ಪ್ರಕಾಶ ಪಾಟೀಲ್, ಉಪಾಧ್ಯಕ್ಷರಾದ ನಬಿ ಆನೆಹೊಸೂರು, ಭಾರತೀಯ ಮಜ್ದೂರ್ ಸಂಘದ ಪದಾಧಿಕಾರಿಗಳು, ಆರೋಗ್ಯ ಇಲಾಖೆಯ ಜಿಲ್ಲೆಯ ಹಾಗೂ ತಾಲೂಕಿನ ಪದಾಧಿಕಾರಿಗಳು, ಡಾ.ಸೂಗೂರೇಶ, ರವಿ ಹೂಗಾರ್, ಪ್ರತಾಪ್, ಹುಚ್ಚಪ್ಪ, ಹನುಮೇಶ್, ಅಮರೇಶ ಎಲಿಗಾರ್, ಸಿದ್ರಾಮೇಶ್ವರ ಸ್ವಾಮಿ, ವಾಹೀದ್, ಯೌಹಾನ್, ಗಂಗೂಬಾಯಿ, ಪ್ರೇಮಾ, ನೀಲಾಂಬಿಕಾ, ರೋಸ್ಮೇರಿ ಸೇರಿದಂತೆ ಹಲವಾರು ನೌಕರರು ಪಾಲ್ಗೊಂಡಿದ್ದರು.