ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಇತ್ತೀಚಿಗೆ ಧಾರವಾಡ ಜಿಲ್ಲೆಯ ಭೋಗೂರು ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಹಾಗೂ ಸಾವಿನ ಘಟನೆಯನ್ನು ಖಂಡಿಸುತ್ತಾ, ಈ ದೃಷ್ಕೃತ್ಯಕ್ಕೆ ಕಾರಣನಾದ ಕಾಮಾಂಧನಿಗೆ ಕಾನೂನಾತ್ಮಕ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ವೀರಶೈವ ಜಂಗಮ ಸಮಾಜ ಲಿಂಗಸಗೂರು ವತಿಯಿಂದ ಮಾನ್ಯ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಭೋಗೂರು ಗ್ರಾಮದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಸಾವಿಗೆ ಕಾರಣನಾದವನಿಗೆ ಕೇವಲ ಜೈಲುಶಿಕ್ಷೆಯಷ್ಟೇ ನೀಡದೇ ಮುಂದೆ ಇಂತಹ ದುಷ್ಕ್ರತ್ಯ , ಅತ್ಯಾಚಾರ, ಕೊಲೆ ಮೊದಲಾದ ಸಮಾಜ ಘಾತುಕ ಪ್ರಕರಣಗಳನ್ನು ತಡೆಯಲು ಕಾನೂನಾತ್ಮಕ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತಾ ಸಹಾಯಕ ಆಯುಕ್ತರ ಮೂಲಕ ಮಾನ್ಯ ಮುಖ್ಯಮಂತ್ರಿ ಅವರಿಗೆ ತಮ್ಮ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ವೇಳೆ ಶಾಂತಿ ಸೌಹಾರ್ಧಯುತವಾದ ನಾಡಲ್ಲಿ, ದೇವತೆ-ಸನಾತನ ಧರ್ಮ, ಧರ್ಮ ಗ್ರಂಥ, ಪರಂಪರೆ, ಧಾರ್ಮಿಕ ಸಂಪ್ರದಾಯ, ಕಲೆ, ಸಾಹಿತ್ಯ, ಸಂಸ್ಕೃತಿ, ಮಠಾಧೀಶರು, ದಾರ್ಶನಿಕರು, ಅರ್ಚಕ-ಪುರೋಹಿತರ ಬಗ್ಗೆ ಅವಮಾನ, ನಿಂದನೆ, ದೌರ್ಜನ್ಯ , ಹಲ್ಲೆ ಪ್ರಕರಣಗಳು ನಡೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ತಿಳಿಸುತ್ತಾ ಇದನ್ನು ಮಾನ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಈ ಬಗ್ಗೆ ಸೂಕ್ತ ಕಾಯ್ದೆ ಜಾರಿಗೆ ತರಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ಶರಣಯ್ಯಸ್ವಾಮಿ ದಾಸೋಹಮಠ ಹೊನ್ನಳ್ಳಿ, ಪ್ರಭಯ್ಯ ಸ್ವಾಮಿ ಅತ್ತನೂರು, ವೀರಭದ್ರಯ್ಯಸ್ವಾಮಿ ಯಲಗಲದಿನ್ನಿ, ಚನ್ನಯ್ಯಸ್ವಾಮಿ ಹಿರೇಮಠ, ಗುಂಡಯ್ಯ ಸೊಪ್ಪಿಮಠ ಕರಡಕಲ್, ಅಮರೇಶ ಗಂಭೀರಮಠ, ಮಹಾದೇವಯ್ಯಸ್ವಾಮಿ ಗೌಡೂರು, ವೀರಭದ್ರಯ್ಯಸ್ವಾಮಿ ಗುಂತಗೋಳ, ವೀರೇಶ ಜಗವತಿಮಠ, ಮಂಜುನಾಥ ದೀವಿಮಠ, ಸಂಗಯ್ಯಸ್ವಾಮಿ ಹಿರೇಮಠ, ಸಿದ್ಧಯ್ಯಸ್ವಾಮಿ, ರುದ್ರಯ್ಯಸ್ವಾಮಿ ಐದನಾಳ, ಹಾಗೂ ಶಿವಕುಮಾರ ನಂದಿಕೋಲಮಠ ಮತ್ತು ಸಮಾಜದ ಗಣ್ಯರು, ಪ್ರಮುಖರು, ಯುವಕರು ಹಾಜರಿದ್ದರು.