*ಬಾಲಿವುಡ್ ನ ರಿಷಿ ಕಪೂರ್ ನಿಧನ.
*ಇರ್ಪಾನ್ ಖಾನ್ ನಂತರ ಮತ್ತೊಬ್ಬ ನಟನನ್ನು ಕಳೆದುಕೊಂಡ ಬಾಲಿವುಡ್.
*ಖಾನ್-ಕಪೂರ್ ಜೋಡಿ ಮತ್ತು ರಿಷಿ ಕಪೂರ್ ಕೊನೆ ಘಳಿಗೆಯ ವಿಡಿಯೊ ವೈರಲ್?.
*ದೆಹಲಿ ಪೊಲೀಸರಿಂದ, ಮಗಳು ರಿದ್ದಿಮಾ ಕಪೂರ್ ಜೊತೆ ಐದು ಮಂದಿ ಮುಂಬೈಗೆ ತೆರಳಲು ಮೂವ್ ಮೆಂಟ್ ಪಾಸ್ !
ವರದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು.
ಮುಂಬೈ: ಬಾಲೊವುಡ್ ನ ಹಿರಿಯ ನಟ-ನಿರ್ದೇಶಕ-ನಿರ್ಮಾಪಕ ರಿಷಿ ಕಪೂರ್ ಗುರುವಾರ ಬೆಳಗ್ಗೆ ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕುಟುಂಬದ ಸದಸ್ಯರು ಮತ್ತು ಭಾರತದ ಹಿರಿಯ ನಟರು ಸೇರಿದಂತೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
67 ವಯಸ್ಸಿನ ಕಪೂರ್ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು, 2018 ರಲ್ಲಿ ಅಮೇರಿಕಾದಲ್ಲಿ ಕ್ಯಾನ್ಸರ್ ಗೆ ತಿಕಿತ್ಸೆ ಪಡೆದು, ಸಪ್ಟೆಂಬರ್ 2019 ರಲ್ಲಿ ಭಾರತಕ್ಕೆ ಮರಳಿದ್ದರು.
1970 ರಲ್ಲಿ “ಮೇರಾ ನಾಮ್ ಜೋಕರ್” ಚಲನಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು, ನಂತರ 1973 ರಲ್ಲಿ “ಬಾಬಿ” ಚಿತ್ರದ ಮೂಲಕ ಹೀರೊ ಆಗಿ ನಟಿಸಲು ಪ್ರಾರಂಬಿಸಿದ್ದರು. ಇವರ ಕೊನೆಯ ಚಿತ್ರ “102 ನಾಟ್ ಔಟ್” ಆಗಿದೆ.
ಬುಧವಾರವಷ್ಟೆ ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ನನ್ನು ಬಾಲಿವುಡ್ ಕಳೆದುಕೊಂಡಿತ್ತು, ಇರ್ಫಾನ್ ಮತ್ತು ಕಪೂರ್ ನಟನೆಯ “ಡಿ ಡೇ” ಚಲನ ಚಿತ್ರದ ಜೊತೆಗಿನ ವಿಡಿಯೊ ಮೂಲಕ ಅಭಿಮಾನಿಗಳು ಶ್ರದ್ದಾಂಜಲಿ ಸೂಚಿಸಿದ್ದರು, ಈಗ ರಿಷಿ ಕಪೂರ್ ಮತ್ತು ಡಾಕ್ಟರ್ ಜೊತೆಗಿನ ಕೊನೆಯ ವಿಡಿಯೊ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಿದೆ.