ರಾಷ್ಟ್ರೀಯ ಜೈವಿಕ ಇಂಧನ ಕಾಯ್ದೆ – 2018ಕ್ಕೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ನೂತನ ತಿದ್ದುಪಡಿ, ದೇಶದಲ್ಲಿ ಜೈವಿಕ ಇಂಧನ ಬಳಕೆಗೆ ಉತ್ತೇಜನ ನೀಡಲಿದ್ದು, ಪೆಟ್ರೋಲ್‌ನಲ್ಲಿ ಶೇಕಡ 20ರಷ್ಟು ಎಥೆನಾಲ್ ಮಿಶ್ರಣಕ್ಕೆ ಹೆಚ್ಚಿನ ಅವಕಾಶ ನೀಡಲಿದೆ.
ಅಲ್ಲದೆ ಜೈವಿಕ ಇಂಧನ ರಫ್ತಿಗೂ ಅವಕಾಶ ಒದಗಿಸಲಿದೆ. ’ಮೇಕ್ ಇನ್ ಇಂಡಿಯಾ’ ಅಭಿಯಾನದಡಿ, ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆಗೆ ನೂತನ ತಿದ್ದುಪಡಿ ಉತ್ತೇಜನಕಾರಿಯಾಗಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಆಮದು ಕಡಿತಗೊಳಿಸುವ ಗುರಿ ಹೊಂದಿದೆ. ನೂತನ ತಿದ್ದುಪಡಿ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗೆ ಪೂರಕವಾಗಿದ್ದು, 2047ರ ವೇಳೆಗೆ, ಭಾರತವನ್ನು ಇಂಧನ ಸ್ವಾವಲಂಬಿಯಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುವ ಗುರಿ ಹೊಂದಿದೆ.
ಸಾರ್ವಜನಿಕ ಉದ್ಯಮ ಸಂಸ್ಥೆಗಳ ಬಂಡವಾಳ ವಾಪಸಾತಿ ಶಿಫಾರಸ್ಸು ಸಮಿತಿಯನ್ನು ಬಲಪಡಿಸುವ ಪ್ರಸ್ತಾವಕ್ಕೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.