“ನಾಡಿನ ಎಲ್ಲ ಮುಸ್ಲಿಂ ಬಾಂಧವರಿಗೆ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು. ತ್ಯಾಗ-ಬಲಿದಾನಗಳ ಸಂಕೇತವಾಗಿರುವ ಈದ್ ಉಲ್-ಅಧ ಎಲ್ಲರ ನೋವುಗಳನ್ನು ಕಳೆದು, ಆರೋಗ್ಯ, ನಲಿವುಗಳನ್ನು ಹೊತ್ತು ತರಲಿ, ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ. ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ ಎಂದು ಪ್ರಾರ್ಥಿಸೋಣ. ಸುರಕ್ಷಿತವಾಗಿ ಹಬ್ಬ ಆಚರಿಸಿ.”_ ಬಿ ಎಸ್ ಯಡಿಯೂರಪ್ಪ , ಮಾನ್ಯ ಮುಖ್ಯಮಂತ್ರಿಗಳು.

“ಬಕ್ರೀದ್ ಹಬ್ಬದ ತ್ಯಾಗ, ಬಲಿದಾನದ ಸಂದೇಶ, ಜನತೆಯ ಕಷ್ಟಕಾರ್ಪಣ್ಯ, ನೋವು-ದುಃಖಗಳಿಗೆ ಸ್ಪಂದಿಸಲು ನಮಗೆಲ್ಲ ಸ್ಪೂರ್ತಿ ನೀಡಲಿ. ದುರಿತದ ಕಾಲವನ್ನು ಜೊತೆಜೊತೆಯಾಗಿ ಎದುರಿಸುವ ಸದ್ಭಾವನೆ ನಮ್ಮದಾಗಲಿ. ಮುಸ್ಲಿಮ್ ಬಂಧುಗಳೆಲ್ಲರಿಗೂ ಈದ್ ಮುಬಾರಕ್.” _ ಸಿದ್ಧರಾಮಯ್ಯ, ಮಾಜಿ ಮುಖ್ಯ ಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು.

“ನಾಡಿನ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಹಬ್ಬವು ಎಲ್ಲೆಡೆ ಮತ್ತಷ್ಟು ಸ್ನೇಹ-ಸೌಹಾರ್ದತೆಯನ್ನು ಪಸರಿಸಲಿ ಎಂದು ಆಶಿಸುತ್ತೇನೆ.” _ ಎಚ್ ಡಿ ಕುಮಾರಸ್ವಾಮಿ, ಜೆ ಡಿ ಎಸ್ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು.
“ಮಾಸ್ಕ್ ಧರಿಸಿ–ದೈಹಿಕ ಅಂತರ ಕಾಪಾಡಿ–ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಿ”