ಟ್ವೀಟ್ ಕಾರ್ನರ್ !
ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಂದ ಕನ್ನಡ ಭಾಷೆಯಲ್ಲಿ ಶುಭಾಷಯ:
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಖಾತೆಯಲ್ಲಿ ನಾಡ ಜನತೆಗೆ ನಾಡ ಭಾಷೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಅಲ್ಲದೇ ಭಾರತದ ರಾಷ್ಟ್ರ ಪತಿಗಳಾದ ರಾಮ ನಾಥ್ ಕೋವಿಂದ್ ಅವರು ಕೂಡಾ ನಾಡ ಭಾಷೆ ಕನ್ನಡದಲ್ಲಿ ಟ್ವೀಟ್ ಮೂಲಕ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.


‘ನಾಡಿನ ಸಮಸ್ತ ಜನತೆಗೆ ಯುಗಾದಿಯ ಹಾರ್ದಿಕ ಶುಭಾಶಯಗಳು. ನೂತನ ಪ್ಲವ ಸಂವತ್ಸರವು ಎಲ್ಲರ ಬಾಳಿನಲ್ಲಿ ಆರೋಗ್ಯ, ಸುಖ, ಸಮೃದ್ಧಿ, ಯಶಸ್ಸನ್ನು ಹೊತ್ತು ತರಲಿ, ಸಾಂಕ್ರಾಮಿಕ ರೋಗದ ಪಿಡುಗು ನಾಡಿನಿಂದ ತೊಲಗಲಿ. ನಾವೂ ಸುರಕ್ಷಿತರಾಗಿದ್ದು, ಇತರರೂ ಸುರಕ್ಷಿತರಾಗಿರುವಂತೆ, ಎಲ್ಲ ಮುನ್ನೆಚ್ಚರಿಕೆ ವಹಿಸಿ ಹಬ್ಬ ಆಚರಿಸೋಣ‘ _ ಶ್ರೀ ಬಿ ಎಸ್ ಯಡಿಯೂರಪ್ಪ , ಮಾನ್ಯ ಮುಖ್ಯಮಂತ್ರಿಗಳು.

“ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಹೊಸ ವರ್ಷದಲ್ಲಿ ಎಲ್ಲರ ಕಷ್ಟಗಳು ದೂರವಾಗಿ, ಶಾಂತಿ, ಸಂತೋಷ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.”_ ಶ್ರೀ ಬಿ ಶ್ರೀರಾಮುಲು, ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು.

“ಓ ಯುಗಾದಿಯೇ, ಹೊಸ ಕಾಲದ ಆದಿಯೇ, ಲೋಕದ ಜನರ ಕಷ್ಟಗಳ ನೀಗುತ್ತಾ ಬಾ… ಆರೋಗ್ಯದ ಭಾಗ್ಯವನ್ನು ಕರುಣಿಸು ಬಾ… ಎಲ್ಲರ ಬಾಳಲ್ಲಿ ಹೊಸ ವರ್ಷದ ಉತ್ಸಾಹ ತುಂಬುತ್ತಾ ಬಾ. ನಾಡಿನ ಎಲ್ಲ ನನ್ನ ಪ್ರೀತಿಯ ಬಂಧುಗಳಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು.” _ ಶ್ರೀ ಸಿದ್ಧರಾಮಯ್ಯ , ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು.