- ಜಪಾನ್‌ನ ‘ಡ್ರೈವ್ ಮೈ ಕಾರ್’ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ಆಸ್ಕರ್ 2022 ಪ್ರಶಸ್ತಿಯನ್ನು ಗೆದ್ದಿದೆ.
- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ 2022 ಅನ್ನು ಮಂಡಿಸಲಿದ್ದಾರೆ.
- ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಿದ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇಂದು ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಡಾ. ಪ್ರಮೋದ್ ಸಾವಂತ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
- ಕರ್ನಾಟಕ SSLC ಪರೀಕ್ಷೆ 2022 ಇಂದು ಆರಂಭವಾಗಲಿದೆ. ಪರೀಕ್ಷೆ ನಡೆಸಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
- ಅಕಾಡೆಮಿ ಪ್ರಶಸ್ತಿಗಳು 2022: ಕಿಂಗ್ ರಿಚರ್ಡ್‌ನಲ್ಲಿನ ಪಾತ್ರಕ್ಕಾಗಿ ವಿಲ್ ಸ್ಮಿತ್ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
- ಉತ್ತರಪ್ರದೇಶ ವಿಧಾನಸಭೆಯ ನೂತನ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನಸಭೆ ಸಭಾಂಗಣದಲ್ಲಿ ಹಂಗಾಮಿ ಸ್ಪೀಕರ್ ರಮಾಪತಿ ಶಾಸ್ತ್ರಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಮಾರ್ಚ್ 29 ರಂದು ವಿಧಾನಸಭಾ ಸ್ಪೀಕರ್ ಚುನಾವಣೆ ನಿಗದಿಯಾಗಿದೆ.
