ಇಂದಿನಿಂದ ಮಾರ್ಚ್ 7ರವರೆಗೆ 5ನೇ ಜನೌಷಧಿ ದಿವಸ್ ಆಚರಿಸಲಾಗುತ್ತಿದೆ. ವಿವಿಧ ನಗರಗಳಲ್ಲಿ ಜನೌಷಧಿ ಯೋಜನೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆಮಿನಾರ್‌ಗಳು, ಮಕ್ಕಳು ಮತ್ತು ಮಹಿಳೆಯರಿಗಾಗಿ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು ಮತ್ತು ಇತರ ಹಲವು ಚಟುವಟಿಕೆಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದೆ.
ಇದು ಜನೌಷಧಿ ಕೇಂದ್ರಗಳ ಬಳಕೆ ಮತ್ತು ಜನೌಷಧಿಯ ಪ್ರಯೋಜನಗಳು ಮತ್ತು ಅದರ ಪ್ರಮುಖ ಲಕ್ಷಣಗಳು ಮತ್ತು ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಜೆನೆರಿಕ್ ಔಷಧಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಜನೌಷಧಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ದೇಶಾದ್ಯಂತ 743 ಜಿಲ್ಲೆಗಳಲ್ಲಿ ಈಗ 9 ಸಾವಿರದ 82 ಜನೌಷಧಿ ಕೇಂದ್ರಗಳಿವೆ.
_CLICK to Follow-Support on Googlenews