ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕೇಂದ್ರವನ್ನು ಉದ್ಘಾಟಿಸಿ, ಬೋಯಿಂಗ್ ಸುಕನ್ಯಾ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಭಿವೃದ್ಧಿ ಹೊಂದುತ್ತಿರುವ ವಿಮಾನಯಾನ ಕ್ಷೇತ್ರದಲ್ಲಿ ದೇಶಾದ್ಯಂತದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಸುಕನ್ಯಾ ಯೋಜನೆಯ ಉದ್ದೇಶವಾಗಿದೆ. ಸಂಶೋಧನೆ ಮತ್ತು ಆವಿಶ್ಕಾರಗಳಲ್ಲಿ ಮುಂದಿರುವ ಬೆಂಗಳೂರು, ಜಾಗತಿಕ ಬೇಡಿಕೆಗಳನ್ನು ಪೂರೈಸುತ್ತಿದೆ. ಅಮೆರಿಕಾದಿಂದ ಹೊರಗೆ ಬೋಯಿಂಗ್ ನ ದೊಡ್ಡ ಸೌಲಭ್ಯ ಕೇಂದ್ರ ಇದಾಗಿದ್ದು, ಇಡೀ ವಿಶ್ವದ ವೈಮಾನಿಕ ಮಾರುಕಟ್ಟೆಗೆ ಶಕ್ತಿ ತುಂಬಲಿದೆ. ಅಲ್ಲದೆ ಮೇಕ್ ಇನ್ ಇಂಡಿಯಾದ ಸಂಕಲ್ಪಕ್ಕೆ ಪೂಕರವಾಗಲಿದೆ. ಕರ್ನಾಟಕ ವೈಮಾನಿಕ ಕ್ಷೇತ್ರದಲ್ಲಿ ಪ್ರಮುಖ ತಾಣವಾಗಿ ಅಭಿವೃದ್ಧಿಯಾಗುತ್ತಿದೆ ಎಂದರು.
ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೋಳ್ಳುವಿಕೆಗೆ ಆಧ್ಯತೆ ನೀಡುತ್ತಿದೆ. ವೈಮಾನಿಕ ಮತ್ತು ವೈಮಾನಾಂತರಿಕ್ಷ ವಲಯಗಳಲ್ಲೂ ಹೆಚ್ಚು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಅದರಂತೆ, ಯುದ್ದ ವಿಮಾನಗಳು ಸೇರಿದಂತೆ ವಿಮಾನಗಳಲ್ಲಿ ಮಹಿಳಾ ಫೈಲಟ್ ಗಳ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಭಾರತದಲ್ಲಿ ಒಟ್ಟು ಫೈಲಟ್ ಗಳ ಫೈಕಿ ಶೇಕಡ 15ರಷ್ಟು ಮಹಿಳಾ ಫೈಲಟ್ ಗಳಿದ್ದಾರೆ. ಚಂದ್ರಯಾನ-3 ಯಶಸ್ಸು ಯುವಜನರಲ್ಲಿ ವೈಜ್ಞಾನಿಕ ಆಸಕ್ತಿ ಹೆಚ್ಚಿಸಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ತಾಂತ್ರಿಕತೆಯಲ್ಲಿ ಹೆಚ್ಚು ಉತ್ಸುಕತೆ ತೋರುತ್ತಿದ್ದಾರೆ ಎಂದರು.
ಭಾರತ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ದೇಶೀಯ ವೈಮಾನಿಕ ಮಾರುಕಟ್ಟೆಯಾಗಿದೆ. 2014ರಲ್ಲಿ ಕಾರ್ಯಾಚರಣೆ ನಡೆಸುವ 70 ವಿಮಾನ ನಿಲ್ದಾಣಗಳಿದ್ದವು, ಇದೀಗ ಈ ಸಂಖ್ಯೆ 150ಕ್ಕೆ ಏರಿದೆ. ಸಂಪರ್ಕ ಮೂಲ ಸೌಕರ್ಯಕ್ಕೆ ಸರ್ಕಾರ ಒತ್ತು ನೀಡಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬೋಯಿಂಗ್ ನ ಹೊಸ ಕೇಂದ್ರದಿಂದ ಬೆಂಗಳೂರಿಗೆ ಮತ್ತೋಂದು ಗರಿ ಮೂಡಿದೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ವಿಶ್ವದ ನಾಲ್ಕನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಎನಿಸಿದೆ. 400ಕ್ಕೂ ಅಧಿಕ ಫಾರ್ಚ್ಯೂನ್-500 ಕಂಪನಿಗಳಿಗೆ ಕರ್ನಾಟಕ ನೆಲೆಯಾಗಿದೆ. ಹೂಡಿಕೆ ಆಕರ್ಶಿಸಲು ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲಾಗಿದೆ. ಕೈಗಾರಿಕಾ ಪರ ನೀತಿಗಳನ್ನು ಜಾರಿಗೆ ತರಲಾಗಿದೆ ಎಂದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ, ಬೋಯಿಂಗ್ ಸಿಒಒ ಸ್ಟಿಫನಿ ಪೊಪ್ ಹಾಗೂ ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ ಉಪಸ್ಥಿತರಿದ್ದರು.
Click to Follow us on DailyHunt: https://dhcreator.dailyhunt.in/app/profile