ಸಂಕ್ಷಿಪ್ತ ಸುದ್ದಿ:
ತುಮಕೂರು: ರೈತ ಬಾಂಧವರ ಆತ್ಮಾಭಿಮಾನದ “ಬೆಳೆ ಸಮೀಕ್ಷೆ ಆ್ಯಪ್”! ತುಮಕೂರು ಜಿಲ್ಲೆಯ ಕೊರ ಗ್ರಾಮದ ರೈತನ ಜಮೀನಿಗೆ ಮಾನ್ಯ ಸಚಿವರಾದ ಬಿ.ಸಿ.ಪಾಟೀಲರು ಭೇಟಿ ನೀಡಿದರು. ರೈತರೊಡನೆ 2020-21 ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಆ್ಯಫ್ ಪ್ರಾತ್ಯಕ್ಷತೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು.


ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗ್ರಾಮದ ರೈತನ ಜಮೀನಿಗೆ ಭೇಟಿ ನೀಡಿ, ರೈತರೊಡನೆ 2020-21 ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು, ರೈತರಿಗೆ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇಲಾಖಾ ಅಧಿಕಾರಗಳು ಸೇರಿದಂತೆ ಶಾಸಕರಾದ ಶ್ರೀಮತಿ ಪೂರ್ಣಿಮಾ, ಗ್ರಾಮದ ರೈತರು ಉಪಸ್ಥಿತರಿದ್ದರು.


