ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಫಿಫಾ 17 ವರ್ಷದೊಳಗಿನ ಮಹಿಳೆಯರು ವಿಶ್ವಕಪ್ ಫುಟ್ಬಾಲ್ ಪಂದ್ಯಗಳ್ನು ಭಾರತದಲ್ಲಿ ನಡೆಸುವ ಕುರಿತಂತೆ ಖಾತ್ರಿಗೆ ಅಂಕಿತ ಹಾಕಲು ಅನುಮೋದನೆ ನೀಡಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಸಂಪುಟ ಸಭೆಯ ಬಳಿಕ ವಿವರ ನೀಡಿದ ಅವರು, ಭಾರತದಲ್ಲಿ ಅಕ್ಟೋಬರ್ 11ರಿಂದ 30ರ ವರೆಗೆ ಆಯೋಜಿಸಲಾಗಿರುವ ಪಂದ್ಯಾವಳಿಯಲ್ಲಿ 17 ತಂಡಗಳು ಭಾಗಿಯಾಗಲಿವೆ. ನವಿ ಮುಂಬೈ, ಗೋವಾ ಮತ್ತು ಭುವನೇಶ್ವರದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ವಿವರಿಸಿದರು. ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರುವುದು ಫುಟ್ಬಾಲ್ ಕ್ರೀಡೆಗೆ ಉತ್ತೇಜನ ನೀಡುತ್ತದೆ. ಭಾರತದ ವನಿತೆಯರು ಕ್ರೀಡಾರಂಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಮಹಿಳಾ ವಿಶ್ವಕಪ್ ಮತ್ತಷ್ಟು ಕ್ರೀಡಾಸಕ್ತರಲ್ಲಿ ಹುಮ್ಮಸ್ಸು ಹೆಚ್ಚಿಸಲಿದೆ ಎಂದರು.
ಕೇಂದ್ರ ಸಚಿವ ಅರ್ಜುನ್ ಮುಂಡಾ ವಿವರ ನೀಡಿ, ವಿವಿಧ ರಾಜ್ಯಗಳಲ್ಲಿನ ಪರಿಶಿಷ್ಟ ಪಂಗಡದ ದೀರ್ಘ ಕಾಲದ ಬೇಡಿಕೆಗಳ ಕುರಿತಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಕರ್ನಾಟಕದ ಬೆಟ್ಟ ಕುರುಬರು ಸೇರಿದಂತೆ ವಿವಿಧ ರಾಜ್ಯಗಳ ಜಾತಿ ಜನಾಂಗಗಳ ಕೆಲವು ಹೆಸರುಗಳನ್ನು ಪಟ್ಟಿಗೆ ಸೇರಿಸಲು ಅನುಮತಿಸಲಾಗಿದೆ ಎಂದು ತಿಳಿಸಿದರು. ಛತ್ತೀಸ್ ಗಢ್ ರಾಜ್ಯದ 12 ಜಾತಿ ಜನಾಂಗಗಳ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಇದೇ ರೀತಿ ಹಿಮಾಚಲ ಹಟ್ಟಿ ಸಮುದಾಯ, ತಮಿಳುನಾಡಿನ ಗಿರಿ ಪ್ರದೇಶದಲ್ಲಿ ವಾಸಿಸುವ ನಾರಿ ಕುರುಬರನ್, ಕುರುಬಿಕರನ್ ಸೇರ್ಪಡೆಗೂ ಅನುಮತಿಸಲಾಗಿದೆ. ರಾಜ್ಯಗಳಿಂದ ಬಂದ ಶಿಫಾರಸ್ಸಿನ ಅನ್ವಯ ಈ ನಿರ್ಧಾರ ಕೈಗೊಳ್ಳಾಗಿದೆ ಎಂದು ತಿಳಿಸಿದರು.
(With PIB inputs)
_CLICK to Follow us on DailyHunt