Thursday, February 20, 2025
Homeಸಂಕ್ಷಿಪ್ತ ಸುದ್ದಿಗಳುಆರೋಗ್ಯಫಿಟ್ ಇಂಡಿಯಾ ಹೊಸ ಟಾಕ್ ಶೋ.. ಹೊಸ ವರ್ಷದ ಫಿಟ್ನೆಸ್ ಯೋಜನೆಗೆ ಭಾರತದ ಉನ್ನತ ಪೌಷ್ಟಿಕತಜ್ಞರು...

ಫಿಟ್ ಇಂಡಿಯಾ ಹೊಸ ಟಾಕ್ ಶೋ.. ಹೊಸ ವರ್ಷದ ಫಿಟ್ನೆಸ್ ಯೋಜನೆಗೆ ಭಾರತದ ಉನ್ನತ ಪೌಷ್ಟಿಕತಜ್ಞರು ಮತ್ತು ಫಿಟ್ನೆಸ್ ತಜ್ಞರು ಸಜ್ಜು!

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ:

  • ಫಿಟ್ ಇಂಡಿಯಾ ಹೊಸ ಟಾಕ್ ಶೋನೊಂದಿಗೆ ನಾಗರಿಕರಿಗೆ ತಮ್ಮ ಹೊಸ ವರ್ಷದ ಫಿಟ್ನೆಸ್ ಯೋಜನೆಯನ್ನು ರೂಪಿಸುವಲ್ಲಿ ಸಹಾಯ ಮಾಡಲು ಭಾರತದ ಉನ್ನತ ಪೌಷ್ಟಿಕತಜ್ಞರು ಮತ್ತು ಫಿಟ್ನೆಸ್ ತಜ್ಞರು ಸಜ್ಜಾಗಿದ್ದಾರೆ.
  • ಈ ಕಾರ್ಯಕ್ರಮವು ಜನವರಿ 8 ರಿಂದ ಫೆಬ್ರವರಿ 26, 2023ರವರೆಗೆ ಫಿಟ್ ಇಂಡಿಯಾದ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಹ್ಯಾಂಡಲ್ ಗಳಲ್ಲಿ, ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ.
  • ಎಂಟು ಕಂತುಗಳ ಮಾತುಕತೆಯ ಮೊದಲ ಸರಣಿಗೆ ಫಿಟ್ ಇಂಡಿಯಾ ಹೆಲ್ತಿ ಹಿಂದೂಸ್ತಾನ್ ಎಂದು ಹೆಸರಿಡಲಾಗಿದೆ.

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾದ ಫಿಟ್ ಇಂಡಿಯಾ ಮೂವ್ಮೆಂಟ್ ಹೊಸ ವರ್ಷದ ಅಂಗವಾಗಿ ‘ಫಿಟ್ ಇಂಡಿಯಾ-ಸಂಡೇ ಟಾಕ್ಸ್’ ಎಂಬ ವಿಶೇಷ ಆನ್ಲೈನ್ ಸರಣಿಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಈ ಕಾರ್ಯಕ್ರಮವು, ಖ್ಯಾತ ಫಿಟ್ನೆಸ್ ತಜ್ಞರು ಮತ್ತು ಫಿಟ್ ಇಂಡಿಯಾ ಐಕಾನ್ ಗಳ ಆನ್ಲೈನ್ ಟಾಕ್ ಶೋ, ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಫಿಟ್ ಇಂಡಿಯಾದ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಹ್ಯಾಂಡಲ್ ಗಳಲ್ಲಿ ಜನವರಿ 8 ರಿಂದ ಫೆಬ್ರವರಿ 26, 2023ರವರೆಗೆ ನಡೆಯಲಿದೆ. ಎಂಟು ಕಂತುಗಳ ಮಾತುಕತೆಯ ಮೊದಲ ಸರಣಿಗೆ ಫಿಟ್ ಇಂಡಿಯಾ ಹೆಲ್ತಿ ಹಿಂದೂಸ್ತಾನ್ ಎಂದು ಹೆಸರಿಡಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಸದೃಢ ರಾಷ್ಟ್ರವನ್ನು ನಿರ್ಮಿಸಲು, ಫಿಟ್ ಇಂಡಿಯಾ ಸಂಡೇ ಟಾಕ್ಸ್ ಎಲ್ಲ ವಯೋಮಾನದವರಿಗಾಗಿ, ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಫಿಟ್ನೆಸ್, ಆರೋಗ್ಯಕರ ಆಹಾರ ಮತ್ತು ಮಾನಸಿಕ ಯೋಗಕ್ಷೇಮದ ಪ್ರಾಮುಖ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಫಿಟ್ ಇಂಡಿಯಾ ಹೆಲ್ತಿ ಹಿಂದೂಸ್ತಾನ್ ತಂಡದ ಸದಸ್ಯರಲ್ಲಿ ಲ್ಯೂಕ್ ಕುಟಿನ್ಹೊ (ಜೀವನ ನಿರ್ವಹಣೆ ವಿಧಾನ ನಿಪುಣ, ಲೈಫ್ ಸ್ಟೈಲ್ ಎಕ್ಸ್ಪರ್ಟ್), ರಿಯಾನ್ ಫರ್ನಾಂಡೊ, ಹೀನಾ ಭಿಮಾನಿ (ಪೋಷಣಶಾಸ್ತ್ರಜ್ಞರು, ನ್ಯೂಟ್ರಿಷನಿಸ್ಟ್) ಮತ್ತು ಸಂಗ್ರಾಮ್ ಸಿಂಗ್ (ಕುಸ್ತಿಪಟು / ಮೋಟಿವೇಷನಲ್ ಸ್ಪೀಕರ್) ಸೇರಿದ್ದಾರೆ. ಈ ಉಪಕ್ರಮದ ಬಗ್ಗೆ ಮಾತನಾಡಿದ ಸಂಗ್ರಾಮ್ ಸಿಂಗ್, “ಫಿಟ್ ಇಂಡಿಯಾ ಹೆಲ್ತಿ ಹಿಂದೂಸ್ತಾನ್ ಕಾರ್ಯಕ್ರಮವು ಸರ್ಕಾರದ ಪ್ರಶಂಸನೀಯ ಉಪಕ್ರಮವಾಗಿದ್ದು, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಭಾಗವಹಿಸಬೇಕು ಮತ್ತು ಅದರ ಪ್ರಯೋಜನವನ್ನು ಪಡೆಯಬೇಕು. ನನ್ನ ಪ್ರಕಾರ, ಆರೋಗ್ಯಕರವಾಗಿರುವ ವ್ಯಕ್ತಿಯೇ ಜೀವನದಲ್ಲಿ ಅತ್ಯಂತ ಶ್ರೀಮಂತ ಮತ್ತು ಸಂಪೂರ್ಣ ವ್ಯಕ್ತಿ. ಈ ಸಂಭಾಷಣೆಗಳ ಮೂಲಕ, ತಮ್ಮ ಎಲ್ಲ ವಯಸ್ಸಿನಲ್ಲೂ ಸದೃಢವಾಗಿರಲು ಜನರು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ಮೂಲಭೂತ ನೈಸರ್ಗಿಕ ವಿಧಾನಗಳನ್ನು ನಾನು ಹಂಚಿಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.

ವಯೋಸಹಜ ಕಾಯಿಲೆಗಳ ವಿರುದ್ಧ ಹೋರಾಡಲು ಹಿರಿಯ ನಾಗರಿಕರಿಗೆ ಫಿಟ್ ಆಗಿ ಉಳಿಯುವ ಅವಶ್ಯಕತೆ ಮತ್ತು ಅದರ ಮಹತ್ವವು ಹೆಚ್ಚಾಗಿದೆ.  ಈ ಬಗ್ಗೆ ಮಾತನಾಡಿದ ಹೀನಾ ಭೀಮಾನಿ, “ವಯಸ್ಸಾಗುವುದು ಸ್ವಾಭಾವಿಕ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಸರಿಯಾದ ಆರೋಗ್ಯ ತಂತ್ರಗಳೊಂದಿಗೆ, ನಾವು ದೀರ್ಘ, ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಬಹುದು. ‘ಫಿಟ್ ಇಂಡಿಯಾ ಹೆಲ್ತಿ ಹಿಂದೂಸ್ತಾನ್’ ಹಿರಿಯ ನಾಗರಿಕರಿಗೆ ಸಲಹೆಗಳನ್ನು ನೀಡುವ ಗುರಿಯನ್ನು ಹೊಂದಿದ್ದು, ಇದರಿಂದ ಅವರು ತಮ್ಮ ಆತ್ಮಘನತೆಯಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ಸಣ್ಣ ಜೀವನಶೈಲಿ ಮಾರ್ಪಾಡುಗಳು ದೊಡ್ಡ ಪರಿಣಾಮ ಬೀರಬಹುದು” ಎಂದು ಹೇಳಿದ್ದಾರೆ.

ತಮ್ಮ ಸಂಭಾಷಣೆಯಲ್ಲಿ, ಒಟ್ಟಾರೆ ಯೋಗಕ್ಷೇಮ ಆರೋಗ್ಯದ ಇತರ ಅಂಶಗಳ ಜೊತೆಗೆ, ಫಿಟ್ ಆಗಿರಲು ಸರಿಯಾದ ಪ್ರಮಾಣದ ನಿದ್ರೆಯ ಪ್ರಾಮುಖ್ಯದ ಬಗ್ಗೆ ಮಾತನಾಡಲಿರುವ ಪೌಷ್ಟಿಕತಜ್ಞ ರಿಯಾನ್ ಫರ್ನಾಂಡೊ, ” ಫಿಟ್ ಇಂಡಿಯಾ ಮೂವ್ಮೆಂಟ್ ನೊಂದಿಗೆ, ನಾಗರಿಕರು ಈಗ ವಿವಿಧ ಆರೋಗ್ಯ-ಸಂಬಂಧಿತ ಸಂಪನ್ಮೂಲಗಳ ಮಾರ್ಗದರ್ಶನಕ್ಕೆ ಪ್ರವೇಶವನ್ನು ಹೊಂದಲಿದ್ದಾರೆ.  ಇದು ಅವರ ಆರೋಗ್ಯದ ಬಗ್ಗೆ ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲಿದೆ. ಫಿಟ್ ಇಂಡಿಯಾ ಹೆಲ್ತಿ ಹಿಂದೂಸ್ತಾನ್ ಸರಣಿಯು ಸರಿಯಾದ ಸಲಹೆಯೊಂದಿಗೆ ನಾಗರಿಕರನ್ನು ಮತ್ತಷ್ಟು ಸಶಕ್ತಗೊಳಿಸುವ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ.

2023ರನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಆಚರಿಸಲು ಸಿರಿಧಾನ್ಯಗಳ ಮಹತ್ವದ ಬಗ್ಗೆ ತಜ್ಞರು ಮಾತನಾಡುವ ಒಂದು ವಿಭಾಗವೂ ಈ ಕಾರ್ಯಕ್ರಮದಲ್ಲಿ  ಇರುತ್ತದೆ.

_with inputs of PIB

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news