ಬೆಳಗಾವಿ: ಸ್ಪೈಸ್ ಜೆಟ್ ವಿಮಾನ ಸೇವಾ ಸಂಸ್ಥೆಯಿಂದ, ಪ್ರಪ್ರಥಮ ಬಾರಿಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ದೆಹಲಿಗೆ ನೇರ ವಿಮಾನಯಾನ ಉದ್ಘಾಟನೆಗೊಂಡಿದೆ.
ಚನ್ನಪಟ್ಟಣ: ತಾಲೂಕಿನ ಮೈಲನಾಯಕನ ಹೊಸಹಳ್ಳಿಯಲ್ಲಿ ಸರ್ಕಾರಿ ಶಾಲೆಗೆ ಉಚಿತವಾಗಿ ಜಮೀನು ಬಿಟ್ಟುಕೊಟ್ಟಿರುವ, ಜಿ.ಪಂ. ಮಾಜಿ ಸದಸ್ಯರೂ ಆಗಿರುವ ಸ್ವಾಮಿ ಅವರನ್ನು ಉನ್ನತ ಸಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಸನ್ಮಾನಿಸಿದರು.
ನೈರುತ್ಯ ರೆಲ್ವೆ: ಕೊರೋನಾ ಹಿನ್ನೆಲೆಯಲ್ಲಿ ಭಾಗಶಃ ಸ್ಥಗಿತಗೊಂಡಿದ್ದ ಯಶವಂತಪುರ ಕಾರವಾರ ಹಗಲು ರೈಲು ಸಂಚಾರ ಇದೇ 16ರಿಂದ ಪುನಾರಂಭಗೊಳ್ಳಲಿದೆ. ವಿಸ್ಟಾಡೋಮ್ ಕೋಚ್ ನೊಂದಿಗೆ ಈ ರೈಲು ಸಂಚರಿಸಲಿದೆ.
ಮಧ್ಯಪ್ರದೇಶ: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಾರ್ವಜನಿಕ ಪ್ರತಿನಿಧಿಗಳೊಂದಿಗೆ 3 MEMU ರೈಲುಗಳನ್ನು ಹಸಿರು ಧ್ವಜದೊಂದಿಗೆ ಚಾಲನೆ ನೀಡಿದರು (ಸಾತ್ನಾ-ಮಾಣಿಕ್‌ಪುರ್, ಸತ್ನಾ-ಇಟಾರ್ಸಿ, ಕಟ್ನಿ-ಬಿನಾ). ಈ MEMU ರೈಲುಗಳು ಸಿಸಿಟಿವಿ ಕ್ಯಾಮೆರಾಗಳು, ಬಯೋ ಶೌಚಾಲಯಗಳು, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆಯಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿವೆ.
ವಿಕಾಸಸೌಧ: ಘೋಷಿತ ಫಲಿತಾಂಶವನ್ನು ಒಪ್ಪದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸುವ ವಾರ್ಷಿಕ ಪರೀಕ್ಷೆಗಳನ್ನು ವ್ಯವಸ್ಥಿತ ಹಾಗೂ ದೋಷರಹಿತವಾಗಿ ಆಯೋಜಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೂಚಿಸಿದ್ದಾರೆ.
ಯಾದಗಿರಿ: “ಸದೃಢ ಭಾರತ ಸ್ವಾತಂತ್ರ್ಯ ಓಟ 2.0 “ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಮತ್ತು ಸರಕಾರಿ ಪದವಿ ಕಾಲೇಜಿನ ಎನ್ ಸಿ ಸಿ / ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ರಾಷ್ಟ್ರೀಯ ಸ್ವಾಭಿಮಾನಕ್ಕೆ ವಿಶ್ವದ ಯಾವುದೇ ಶಕ್ತಿ ಸವಾಲು ಹಾಕಿದರೂ ಅದನ್ನು ಎದುರಿಸಿ ನಿಲ್ಲಲು ನಮ್ಮ ಮೂರೂ ಸೇನಾಪಡೆಗಳು ಸಮರ್ಥವಾಗಿವೆ”_ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್.
“ಜೀವವನ್ನು ಉಳಿಸಿ, ಹೊಸ ಜೀವನ ಕಟ್ಟಿ ಕೊಡುವ ಅಂಗಾಂಗ ದಾನದ ಮಹತ್ವ ಮತ್ತು ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಎಲ್ಲರೂ ಪ್ರಯತ್ನಿಸೋಣ. ಈ ವಿಶ್ವ ಅಂಗಾಂಗ ದಾನ ದಿನದಂದು, ಅಂಗಾಂಗ ದಾನದ ಬಗ್ಗೆ ಇರುವ ಸಂಶಯಗಳನ್ನು, ಹಿಂಜರಿಕೆಯನ್ನು ನಿವಾರಿಸುವ ದೃಢ ಸಂಕಲ್ಪ ತಾಳೋಣ.”_ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು.
ಉಡುಪಿ: “ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಗಳಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯವಿದೆ. ನಾನೂ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸುತ್ತಿದ್ದೇನೆ. ನಾವೆಲ್ಲರೂ ಅಂಗಾಂಗ ದಾನ ಮಾಡಲು ಮುಂದೆ ಬರುವ ಸಂಕಲ್ಪ ಮಾಡೋಣ“._ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮ 2021ರ ಪ್ರಕಾರ 2022 ರೊಳಗೆ ಗುರುತಿಸಲಾದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗುವುದು. ಉತ್ಪಾದನೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಹಲವಾರು ಏಕ ಬಳಕೆ ಪ್ಲಾಸ್ಟಿಕ್ ಅನ್ನು ಮುಂದಿನ ವರ್ಷದ ಜುಲೈ 1 ರಿಂದ ನಿಷೇಧಿಸಲಾಗುವುದು ಎಂದು ಸರ್ಕಾರವು ಸೂಚನೆ ನೀಡಿದೆ.
“ಕಂಪನಿಗಳು, ಶಾಲೆಗಳು, ಕಾಲೇಜುಗಳು, ಇಲಾಖೆಗಳಂತಹ ಸಂಸ್ಥೆಗಳು ನಿವಾಸಿಗಳ ಆಧಾರ್ ವಿವರಗಳಾದ ಆಧಾರ್ ಸಂಖ್ಯೆ, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಬಹಿರಂಗವಾಗಿ ಪ್ರದರ್ಶಿಸಬಾರದು. ವೆಬ್ಸೈಟ್ ಗಳು, ಸಾಮಾಜಿಕ ಮಾಧ್ಯಮ, ಸೂಚನಾ ಫಲಕಗಳು ಇತ್ಯಾದಿಗಳಲ್ಲಿ ಆಧಾರ್ ಮಾಹಿತಿಯನ್ನು ಬಹಿರಂಗವಾಗಿ ಪ್ರಕಟಿಸುವುದು ಕಾನೂನಾತ್ಮಕವಲ್ಲ.”_ಯುಐಡಿಏಐ
