ರಾಷ್ಟ್ರೀಯ – ಸೇನೆ – ಕೋವಿಡ್-19 – ರಾಜಕೀಯ – ಶೇರು ಮಾರುಕಟ್ಟೆ – ದಾಖಲೆ :
- ಭಾರತೀಯ ನೌಕಾ ಸೇನೆಯ ಕಮಾಂಡರ್‌ಗಳ ಸಮ್ಮೇಳನ ದೆಹಲಿಯಲ್ಲಿ ಇಂದಿನಿಂದ ಆರಂಭವಾಗಲಿದೆ. ಸಮ್ಮೇಳನದಲ್ಲಿ ಸಮುದ್ರ ಮೂಲಕ ಮಿಲಿಟರಿ ಕಾರ್ಯತಂತ್ರಗಳ ಕುರಿತು ಕಮಾಂಡರ್ ಗಳ ಮಟ್ಟದಲ್ಲಿ ಮಹತ್ವದ ಮಾತುಕತೆ ನಡೆಯಲಿದ್ದು, ಹಿರಿಯ ಸರ್ಕಾರಿ ಕಾರ್ಯ ನಿರ್ವಾಹಕರೊಂದಿಗೆ ಸಂವಾದ ನಡೆಯಲಿದೆ.
- ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಇಂದು ಬೆಳಗ್ಗೆ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು.
- ದೇಶದಲ್ಲಿ (ಏಪ್ರಿಲ್ 25,2022 ಬೆಳಿಗ್ಗೆ 08 ವರೆಗೆ) ಕಳೆದ 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ-2,541
- ರಾಜ್ಯಗಳು/UTಗಳಲ್ಲಿ COVID-19 ಲಸಿಕೆ ಲಭ್ಯತೆಯ ಕುರಿತು ಅಪ್‌ಡೇಟ್ : ರಾಜ್ಯಗಳು/UTಗಳಿಗೆ 192.74 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಒದಗಿಸಲಾಗಿದೆ, 19.93 ಕೋಟಿಗೂ ಹೆಚ್ಚು ಉಳಿದಿರುವ ಮತ್ತು ಬಳಕೆಯಾಗದ ಲಸಿಕೆ ಡೋಸ್‌ಗಳು ರಾಜ್ಯಗಳು/UTಗಳಲ್ಲಿ ಇನ್ನೂ ಲಭ್ಯ ಇವೆ.
- ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 12.30ಕ್ಕೆ ಸಭೆ ನಡೆಯಲಿದೆ.
- ಶಿವಮೊಗ್ಗದ ನೂತನ ವಿಮಾನ ನಿಲ್ದಾಣ: “ ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲ, ನಿರ್ಧಾರವನ್ನು ಪುನರ್ ಪರಿಶೀಲಿಸಿ, ಸೂಕ್ತ ವೇದಕೆಯಲ್ಲಿ ಚರ್ಚಿಸಿ, ರಾಷ್ಟ್ರ – ನಾಡಿನ ಅಭಿವೃದ್ಧಿಗೆ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿದಂತಹ ಮಹನೀಯರ ಹೆಸರನ್ನು ಈ ವಿಮಾಣ ನಿಲ್ದಾಣಕ್ಕೆ ನಾಮಕರಣ ಮಾಡಲು ಕೋರುತ್ತೇನೆ” ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
- ದೆಹಲಿ | ವಿಶ್ವ ಮಲೇರಿಯಾ ದಿನದಂದು ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ವಹಿಸಿದರು. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಆರೋಗ್ಯ ಸಹಾಯಕ ಡಾ ಭಾರತಿ ಪಿ ಪವಾರ್ ಮತ್ತು ಭಾರತಕ್ಕೆ WHO ಪ್ರತಿನಿಧಿ ಡಾ ರೊಡೆರಿಕೊ ಆಫ್ರಿನ್ ಸಹ ಉಪಸ್ಥಿತರಿದ್ದರು.
- WHO ಗ್ಲೋಬಲ್ ಮಲೇರಿಯಾ ತಾಂತ್ರಿಕ ತಂತ್ರಕ್ಕೆ ಅನುಗುಣವಾಗಿ, ಭಾರತವು 2027 ರ ವೇಳೆಗೆ ಶೂನ್ಯ ಪ್ರಕರಣಗಳನ್ನು ಸಾಧಿಸಲು ಮತ್ತು 2030 ರ ವೇಳೆಗೆ ಮಲೇರಿಯಾವನ್ನು ತೊಡೆದುಹಾಕಲು ಮಲೇರಿಯಾ ನಿರ್ಮೂಲನೆಗೆ ರಾಷ್ಟ್ರೀಯ ಚೌಕಟ್ಟನ್ನು ಅಭಿವೃದ್ಧಿಪಡಿಸಿದೆ: ಡಾ ರೊಡೆರಿಕೊ ಹೆಚ್ ಆಫ್ರಿನ್, ಭಾರತಕ್ಕೆ WHO ಪ್ರತಿನಿಧಿ
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 7ನೇ ಆವೃತ್ತಿಯ ರೈಸಿನಾ ಸಂವಾದವನ್ನು ಉದ್ಘಾಟಿಸಲಿದ್ದಾರೆ. ಈ ಸಂವಾದದಲ್ಲಿ ಐರೋಪ್ಯ ಒಕ್ಕೂಟದ ಅಧ್ಯಕ್ಷೆ ಉರ‍್ಸುಲ ವಾನ್ ಡೆರ್ ಲೆಯನ್ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಸಂವಾದದಲ್ಲಿ ಪಾಲ್ಗೊಳ್ಳಲು ಅವರು ನಿನ್ನೆ ದೆಹಲಿಗೆ ಆಗಮಿಸಿದ್ದಾರೆ.
- ಬಿಹಾರದ ಭೋಜ್‌ಪುರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 78,000 ಜನರು ಏಕಕಾಲದಲ್ಲಿ ರಾಷ್ಟ್ರಧ್ವಜವನ್ನು ಹಾರಾಡಿಸುವ ಮೂಲಕ ವಿಶ್ವದಾಖಲೆ ಮಾಡಲಾಗಿದೆ.
- 2021-22ರಲ್ಲಿ ಭಾರತದ ಸೆರಾಮಿಕ್ಸ್ ಮತ್ತು ಗ್ಲಾಸ್‌ವೇರ್ ಉತ್ಪನ್ನಗಳ ರಫ್ತು 3 ಸಾವಿರ 464 ಮಿಲಿಯನ್ ಯುಎಸ್ ಡಾಲರ್‌ಗೆ ದಾಖಲೆಯಾಗಿದೆ.
- ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 23 ಪೈಸೆ ಕುಸಿದು 76.65 ಕ್ಕೆ ತಲುಪಿದೆ.
- ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 785 ಪಾಯಿಂಟ್‌ಗಳಿಂದ 56,412.14 ಕ್ಕೆ ಕುಸಿದಿದೆ; ನಿಫ್ಟಿ 243.35 ಅಂಕ ಕುಸಿದು 16,928.60ಕ್ಕೆ ತಲುಪಿದೆ.
