- ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಉದ್ಯೋಗ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 2024 – 25 ನೇ ಸಾಲಿಗೆ ಉಚಿತ ಮತ್ತು ಶಿಷ್ಯ ವೇತನ ಸಹಿತ ವೃತ್ತಿ ತರಬೇತಿ ಕಾರ್ಯಕ್ರಮಗಳು
- ತರಬೇತಿ ಸಮಯದಲ್ಲಿ ಮಾಸಿಕ ಒಂದು ಸಾವಿರ ರೂಪಾಯಿ ಶಿಷ್ಯ ವೇತನ
- ಮೂರು ಲಕ್ಷ ರೂಪಾಯಿ ಆದಾಯ ಮಿತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು
- ವೃತ್ತಿ ತರಬೇತಿ ಅವಧಿ ಒಂದು ವರ್ಷ : ಕನಿಷ್ಟ 10+2 ಶೈಕ್ಷಣಿಕ ವಿದ್ಯಾರ್ಹತೆ ಹೊಂದಿದವರಿಗೆ ಆದ್ಯತೆ
ಉದ್ಯೋಗ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಗೆ 2024 – 25 ನೇ ಸಾಲಿಗೆ ಉಚಿತ ಮತ್ತು ಶಿಷ್ಯ ವೇತನ ಸಹಿತ ತರಬೇತಿ ಕಾರ್ಯಕ್ರಮಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ತರಬೇತಿ ಕಾರ್ಯಕ್ರಮ 2024 ರ ಜುಲೈ 1 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
1. ವಿಶೇಷ ತರಬೇತಿ ಕಾರ್ಯಕ್ರಮ: ಇದು ಒಂದು ವರ್ಷದ ಕೋರ್ಸ್ ಆಗಿದ್ದು, ವಯೋಮಿತಿ 18 ರಿಂದ 27 ವರ್ಷ, ಕನಿಷ್ಟ 10+2 ಶೈಕ್ಷಣಿಕ ಅರ್ಹತೆ ಇರಬೇಕಾಗುತ್ತದೆ ಮತ್ತು ಶುಲ್ಕ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
2. ‘ಓ’ ಹಂತದ ಕಂಪ್ಯೂಟರ್ ತರಬೇತಿ ಮತ್ತು ಕಂಪ್ಯೂಟರ್ ಹಾರ್ಡ್ ವೇರ್ ನಿರ್ವಹಣೆ ತರಬೇತಿ. ಆಫೀಸ್ ಆಟೋಮೇಶನ್ ಅಕೌಂಟಿಂಗ್ ಅಂಡ್ ಪಬ್ಲೀಷಿಂಗ್ ಅಸಿಸ್ಟೆಂಟ್, ಕಂಪ್ಯೂಟರ್ ಅಪ್ಲಿಕೇಶನ್ ಅಂಡ್ ಬ್ಯುಸಿನೆಸ್ ಅಕೌಂಟಿಂಗ್ ಅಸೋಸಿಯೇಟ್, ಸೈಬರ್ ಸೆಕ್ಯೂರ್ಡ್ ವೆಬ್ ಡೆವಲಪ್ಮೆಂಟ್ ಅಸೋಸಿಯೇಟ್ ಹುದ್ದೆಗಳಿಗೆ ನಿಯೋಲಿಟ್ ತಂತ್ರಜ್ಞಾನದ ಮೂಲಕ ತರಬೇತಿ ನೀಡಲಾಗುತ್ತದೆ.
ಇವು ತಲಾ ಒಂದು ವರ್ಷದ ಕೋರ್ಸ್ ಗಳಾಗಿವೆ. ಈ ಎಲ್ಲಾ ಕೋರ್ಸ್ ಗಳಿಗೆ ಕನಿಷ್ಟ 10+2 ಶೈಕ್ಷಣಿಕ ಅರ್ಹತೆ ಇರಬೇಕಾಗುತ್ತದೆ. ಶುಲ್ಕ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

Representative image
ಪ್ರತಿಯೊಂದು ಕೋರ್ಸ್ ಗೆ ಮಾಸಿಕ ತಲಾ ಒಂದು ಸಾವಿರ ರೂಪಾಯಿ ಶಿಷ್ಯ ವೇತನ ನೀಡಲಾಗುತ್ತದೆ. ವಿಶೇಷ ತರಬೇತಿ ಯೋಜನೆಗೆ 2024 ರ ಜುಲೈ 1ಕ್ಕೆ ಅನ್ವಯವಾಗುವಂತೆ 18 ರಿಂದ 27 ವರ್ಷ ವಯೋಮಿತಿಯವರು ಅರ್ಹತೆ ಪಡೆಯಲಿದ್ದಾರೆ. ಉಳಿದ ಕೋರ್ಸ್ ಗಳಿಗೆ 18 ರಿಂದ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ವಾರ್ಷಿಕ 3 ಲಕ್ಷ ರೂಪಾಯಿ ಆದಾಯ ಮಿತಿಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲಿದ್ದಾರೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಪುಸ್ತಕ ಮತ್ತು ಪರಿಕರಗಳನ್ನು ಉಚಿತವಾಗಿ ಪಡೆಯಲಿದ್ದಾರೆ.
ಅರ್ಹ ಅರ್ಜಿದಾರರು ಸ್ವಯಂ ದೃಢೀಕರಣದೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಸ್ಥಳೀಯ ಉದ್ಯೋಗ ವಿನಿಯಮ ಕೇಂದ್ರದ ನೋಂದಣಿ ಚೀಟಿ, ಆಧಾರ್ ಕಾರ್ಡ್ , ಬ್ಯಾಂಕ್ [ಬ್ಯಾಂಕ್ ಪುಸ್ತಕದ ನಕಲು ಪ್ರತಿ] ವಿವರಗಳನ್ನು ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ, ಪ.ಜಾ/ಪ.ಪಂಗಡಗಳಿಗಾಗಿ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ಸರ್ಕಾರಿ ಮಾದರಿ ಐಟಿಐ ಕ್ಯಾಂಪಸ್, ಡೈರಿ ಸರ್ಕಲ್, ಬೆಂಗಳೂರು- 560029.
ಹೆಚ್ಚಿನ ಮಾಹಿತಿಗಾಗಿ: 080-29756192/ 9620933988, www ಡಾಟ್ labour ಡಾಟ್ gov ಡಾಟ್ in, www ಡಾಟ್ ncs ಡಾಟ್ gov ಡಾಟ್ inಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಾಮಾನ್ಯ ಉದ್ಯೋಗ ನಿರ್ದೇಶನಾಲಯ ಕೇಂದ್ರದ ಪ್ರಕಟಣೆ ತಿಳಿಸಿದೆ.