ಸ್ಯಾಂಡಲ್ ವುಡ್ ನಲ್ಲಿ ಬರುವ ಶುಕ್ರವಾರ ಸುಮಾರು ಹತ್ತು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಹೊಸಬರ ಸಾಹಸಗಳ ಜೊತೆಗೆ ಹಳಬರ ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ದ್ರಾಕ್ಷಾಯಿಣಿ ಮೂವಿ ಮೇಕರ್ಸ್ ನ ಎರಡನೇ ಚಲನಚಿತ್ರ, ಬಸವರಾಜ ಹಿರೇಮಠ ಅವರ ನಿರ್ಮಾಣ-ನಿರ್ದೇಶನ ಮಾಡಿರುವ ಚಿತ್ರ ಬಿಡುಗಡೆಗೆ “ಚೇರ್ಮನ್” ಹೆಚ್ಚು ಸದ್ದು ಮಾಡುತ್ತಿದೆ.
ಹಳ್ಳಿಯ ವಾತಾವರಣದಲ್ಲಿ ನಡೆಯುವ ಪ್ರೀತಿ ಸ್ನೇಹ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡುವ ಕಥಾಹಂದರ ಈ ಚಿತ್ರದಲ್ಲಿದ್ದು, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ಯುವಕರನ್ನು ರಾಜಕೀಯಕ್ಕೆ ಸೆಳೆಯುವ ಕಥಾವಸ್ತು ಚಿತ್ರವು ಒಳಗೊಂಡಿದ್ದು, ಇದೇ ಮಾರ್ಚ್ 3, ಶುಕ್ರವಾರದಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬೆಳ್ಳಿತರೆಗೆ ಬರಲಿದೆ.
ಚಿತ್ರದಲ್ಲಿ ಹುಬ್ಬಳ್ಳಿಯ ಮನು ಮೊದಲಬಾರಿಗೆ ನಾಯಕ ನಟನಾಗಿ, ನಾಯಕಿಯರಾಗಿ ರಾಧಾಶ್ರೀ ಮತ್ತು ಹರ್ಷಲಾ ಹನಿ ಅಭಿನಯಿಸಿದ್ದಾರೆ.
ಚಿತ್ರವನ್ನು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುತ್ತಲಿನ ಗ್ರಾಮಗಳು, ಜಲದುರ್ಗ ಕೋಟೆ, ಮಸ್ಕಿ ಮಲ್ಲಿಕಾರ್ಜುನ ದೇವಸ್ಥಾನ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರಿನ ಹಲವೆಡೆ ಚಿತ್ರೀಕರಣ ಮಾಡಲಾಗಿದೆ.
ಚಿತ್ರಕ್ಕೆ ಶಿವು ಭೇರಿಗಿ ಅವರ ಸಂಗೀತ -ಸಾಹಿತ್ಯ, ಅನನ್ಯ ಭಟ್ ಮೆಹಬೂಬ್ ಸಾಬ್ ಚೇತನ್ ಶಾಂತಲಾ ನವೀನ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ, ಈಗಾಗಲೇ ಚಿತ್ರದ ಹಾಡುಗಳ ಸಾಹಿತ್ಯ-ಸಂಗೀತ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯೊಂದಿಗೆ ವೈರಲ್ ಆಗಿವೆ.
ಹಲಗೂರು ವೆಂಕಟೇಶ್ ಸಂಭಾಷಣೆ ಬರೆದು ಸಹಾಯಕ ನಿರ್ದೇಶನ ಮಾಡಿದ್ದಾರೆ. ವಿಜಯ್ ಎಸ್. ಅವರ ಛಾಯಾಗ್ರಹಣ, ರಘು ಎಲ್. ಅವರ ಸಂಕಲನ, ನೃತ್ಯ ನಿರ್ದೇಶನ ಅಕುಲ್, ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನವಿದೆ.
“ಚೇರ್ಮನ್ ” ನಲ್ಲಿ ಪ್ರಮುಖ ಪಾತ್ರಗಳಲ್ಲಿ ಬಲರಾಜವಾಡಿ, ಶಂಕರ್ ಪಾಟೀಲ್, ಶಿವಕುಮಾರ್, ಆರಾಧ್ಯ, ಗವಿ ವಸ್ತ್ರದ, ಪ್ರೇಮಲತಾ, ಆಶಾ ನಾಯಕ್, ಕಾಮಿಡಿ ಕಿಲಾಡಿಯ ಮುತ್ತುರಾಜ್, ಉತ್ತರ ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರಾದ ಸಿದ್ದು ನಾಲತವಾಡ ಹಾಗೂ ಲಿಖಿತೇಶ್, ಅಲ್ಲಾಭಕ್ಷ ಶಶಿ, ಬದ್ರಿ ನಾರಾಯಣ ಸೇರಿದಂತೆ ಹಿರಿಯ ಹಾಗೂ ಸ್ಥಳೀಯ ಕಲಾವಿದರು ಅಭಿನಯಿಸಿದ್ದಾರೆ.
_CLICK to Follow-Support us on DailyHunt