ನ್ಯೂಸ್ ಬುಲೆಟಿನ್ !

0
131
  1. ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಭಾರತೀಯ ಒಲಿಂಪಿಕ್ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ.
  2. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 29 ಸಾವಿರದ 689 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದೆ. ಚೇತರಿಕೆ ಪ್ರಮಾಣ 97.39 % , ಮರಣ ಪ್ರಮಾಣ 1.34 %.
  3. “ಸರ್ಕಾರ ಎಲ್ಲ ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ಧವಿದ್ದರೂ ಸಹ ಪ್ರತಿಪಕ್ಷ ಅನಗತ್ಯವಾಗಿ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಚರ್ಚೆಗಳಿಂದ ಪಲಾಯನಗೈಯ್ಯುತ್ತಿದೆ _ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ.
  4. ಲೋಕಸಭೆಯಲ್ಲಿ ನಿನ್ನೆ ಪ್ರತಿಪಕ್ಷಗಳ ಗದ್ದಲದ ನಡುವೆಯೇ ಕಾರ್ಖಾನೆಗಳ ನಿಯಂತ್ರಣ ತಿದ್ದುಪಡಿ ಮಸೂದೆ-2021 ಮತ್ತು ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ರಾಷ್ಟ್ರೀಯ ಕೇಂದ್ರದ ಮಸೂದೆ -2021 ಕ್ಕೆ ಅನುಮೋದನೆ ದೊರೆತಿದೆ.
  5. ದೇಶದಲ್ಲಿ ಸಂಶೋಧನೆಗೆ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ, ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪಿಸಲು ಉದ್ದೇಶಿಸಿದೆ”_ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
  6. ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ” _ ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಡಾ. ಭಾಗವತ್ ಕರಡ್
  7. ನೂತನ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಇಂದು ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ; ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
  8. ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಕರ್ನಾಟಕಕ್ಕೆ ವೀಕ್ಷಕರಾಗಿ ಬರುವ ನಿರೀಕ್ಷೆ. ಕರ್ನಾಟಕ ಬಿಜೆಪಿಯ ಶಾಸಕರು ಇಂದು ಸಂಜೆ 5 ಗಂಟೆಗೆ ಸಭೆ ಸೇರುವ ಸಾಧ್ಯತೆ ಇದೆ.
  9. ಒಲಂಪಿಕ್: ಭಾರತದ ಹಾಕಿ ತಂಡ ಸ್ಪೇನ್ ವಿರುದ್ಧ 3-0 ಅಂತರದಿಂದ ಜಯಶಾಲಿಯಾಗಿದೆ.
  10. ಅಸ್ಸಾಂ : ಮಿಜೋರಾಂನ ಗಡಿ ಘರ್ಷಣೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಭೇಟಿ ಮಾಡಲು ಸಿಎಂ ಸಿಲ್ಚಾರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
  11. CRPF  ಸಿಬ್ಬಂದಿಗೆ 83 ನೇ ರೈಸಿಂಗ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
  12. ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ತಜಿಕಿಸ್ತಾನ್‌ಗೆ ತೆರಳಲಿದ್ದಾರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಾಳೆ ಎಸ್‌ಸಿಒ ರಕ್ಷಣಾ ಮಂತ್ರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದುಶಾನ್ಬೆ ಅವರ ಭೇಟಿಯ ಸಮಯದಲ್ಲಿ, ದ್ವಿಪಕ್ಷೀಯ ವಿಷಯಗಳು ಮತ್ತು ಪರಸ್ಪರ ಹಿತಾಸಕ್ತಿಯ ಇತರ ವಿಷಯಗಳ ಬಗ್ಗೆ ಚರ್ಚಿಸಲು ಅವರು ತಮ್ಮ ತಾಜಿಕ್ ಪ್ರತಿರೂಪ ಕರ್ನಲ್ ಜನರಲ್ ಶೆರಾಲಿ ಮಿರ್ಜೊ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ_  ರಕ್ಷಣಾ ಸಚಿವರ ಕಚೇರಿ.

LEAVE A REPLY

Please enter your comment!
Please enter your name here