ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಚುನಾವಣಾ ಅಯೋಗವು ಕೈಗೊಂಡ ಕಾರ್ಯಾಚರಣೆಯಲ್ಲಿ ಈವರೆಗೆ ಒಟ್ಟು 174.10 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದೆ.
71.93 ಕೋಟಿ ರೂಪಾಯಿ ನಗದು, 18.87 ಕೋಟಿ ರೂಪಾಯಿ ಮೌಲ್ಯದ ಉಚಿತ ಕೊಡುಗೆಗಳು, 38.74 ಕೋಟಿ ರೂಪಾಯಿ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. 15.11 ಕೋಟಿ ರೂಪಾಯಿ ಮೌಲ್ಯದ 820 ಕೆಜಿ ಮಾದಕ ವಸ್ತುಗಳು, 26.63 ಕೋಟಿ ರೂಪಾಯಿ. ಮೌಲ್ಯದ 62.26 ಕೆಜಿ ಚಿನ್ನ, 29.43 ಕೋಟಿ ರುಪಾಯಿ ಮೌಲ್ಯದ 464 ಕೆಜಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
1,490 ಎಫ್‌ಐಆರ್ ದಾಖಲಿಸಲಾಗಿದ್ದು, 68,113 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದು ಮಾಡಲಾಗಿದೆ. ಸಿಆರ್‌ಪಿಸಿ ಅಡಿ 4,110 ವ್ಯಕ್ತಿಗಳ ವಿರುದ್ದ ಪ್ರಕರಣಗಳನ್ನು ದಾಖಲಿಸಲಾಗಿದೆ. 10,284 ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.