ಆತ್ಮೀಯ ಓದುಗರೇ, ತಮ್ಮ ಅನಂತ ಓದುಗಾರಿಕೆಗೆ-ಮೆಚ್ಚುಗೆಗೆ ನಮಸ್ಕಾರಗಳು. ನಿಮಗೆ ಸ್ವರಚಿತ ಕವನ – ಹಾಡು – ಕವಿತೆ ಬರೆಯುವ ಹವ್ಯಾಸವಿದೆಯೇ, ತಮ್ಮ ಕವನ-ಹಾಡು-ಕವಿತೆ ಮೂಲಕ ಪ್ರಚಲಿತರಾಗಬೇಕೆ, ಹಾಗಿದ್ದಲ್ಲಿ ಓದುಗಾರರ ಸಲಹೆಯಂತೆ, ನಿಮ್ಮ “ಸ್ಕೈ ನ್ಯೂಸ್” ಇಂತಹದಕ್ಕೊಂದು ಅವಕಾಶ ನೀಡಲು ಇಚ್ಛಿಸುತ್ತದೆ, ತಾವು ಮಾಡಬೇಕಾಗಿರುವುದು ಇಷ್ಟೆ, ಅದೇನೆಂದರೆ ಸ್ವರಚಿತ ಕವನ-ಹಾಡು-ಕವಿತೆಯೊಂದಿಗೆ ತಮ್ಮ ಹೆಸರು, ವಿಳಾಸ-ಊರು (ಪಿನ್ ಕೋಡ್ ಸಹಿತ) ಮತ್ತು ಭಾವಚಿತ್ರದೊಂದಿಗೆ ನಮಗೆ ಇಮೇಲ್ ಮಾಡಿ. ಇಮೇಲ್ ವಿಳಾಸ: skynewslgs@gmail.com
ಒಬ್ಬರಿಗೆ ಎರಡು ಕವಿತೆ-ಹಾಡು-ಕವನಗಳಿಗೆ (ಲಿಖಿತ ರೂಪದ – ಕನ್ನಡ ಭಾಷೆ –ಸೀಮಿತ ಪದಗಳೊಂದಿಗೆ) ಮಾತ್ರ ಅವಕಾಶವಿರುತ್ತದೆ. ನಂತರದ ಅವಕಾಶಕ್ಕಾಗಿ ಸಂದಂಧಿಸಿದ ನಿಬಂಧನೆಗಳನ್ನು ತಮಗೆ ತಿಳಿಸಲಾಗುತ್ತದೆ. (ಷರತ್ತುಗಳು ಅನ್ವಯ)
ಈ ಪ್ರಕ್ರಿಯೆಗೆ ಯಾರನ್ನು ಮಧ್ಯಗಾರರನ್ನಾಗಿ ನೇಮಿಸಿರುವುದಿಲ್ಲ, ಕಾರಣ ಸೂಚಿಸಿದ ಇಮೇಲ್ ಮೂಲಕ ಸಂಪರ್ಕಿಸತಕ್ಕದ್ದು.
ಆಯ್ಕೆಯಾದವುಗಳಿಗೆ, ಬಿತ್ತರಣಿಕೆ / ಪಬ್ಲಿಶ್ ಆಗುವ ದಿನವನ್ನು ಇಮೇಲ್ ಮೂಲಕ ತಮಗೆ ತಿಳಿಸಲಾಗುತ್ತದೆ. ಹಾಗಾಗಿ ಮುಂಬರುವ ದಿನಮಾನಗಳಲ್ಲಿ ನಿಮ್ಮ ಸ್ಕೈ ನ್ಯೂಸ್ ಇಂತಹ ಹತ್ತು ಹಲವಾರು ವಿಭಾಗಗಳನ್ನು ಓದುಗರ ಸಲಹೆ ಮೇರೆಗೆ ಪರಿಚಯಿಸಲಿದೆ, ಹಾಗಾಗಿ ನಿಮ್ಮ “ಸ್ಕೈ ನ್ಯೂಸ್” ನ್ನು ಮತ್ತಷ್ಟು ಪ್ರೋತ್ಸಾಹಿಸಿ-ಬೆಳೆಸಿ, ಇತರರಿಗೂ ಶೇರ್ ಮಾಡಿ. ಈ ಮೂಲಕ ತಮ್ಮ ಕಲೆ-ಹವ್ಯಾಸ-ಪ್ರತಿಭೆ ಮತ್ತು ಇಚ್ಛಾ ಶಕ್ತಿಯನ್ನು ಜಗತ್ತಿಗೆ ತಿಳಿಸುವುದರೊಂದಿಗೆ ಪರಿಚಿತರಾಗಿ.
“ಪ್ರತಿಭೆ ನಿಮ್ಮದು –ಪ್ರೋತ್ಸಾಹ ನಮ್ಮದು”
ಹಾಗೆಯೇ ಕೋವಿಡ್-19 ನಿಯಂತ್ರಣ ನಿಯಮಗಳನ್ನು ಎಲ್ಲರೂ ಪಾಲಿಸೋಣ, ಆದಷ್ಟು ಬೇಗ ದೇಶವನ್ನು ಕೋವಿಡ್-19 ಮುಕ್ತವಾಗಿಸೋಣ.
