- ಶೇ. 100 ರಷ್ಟು ದೃಷ್ಟಿ ವಿಶೇಷಚೇತನರಿಗೆ ಮಾತ್ರ ಈ ಪಾಸ್ ಅನ್ನು ವಿತರಿಸಲಾಗುತ್ತದೆ.
- ನಗರ, ಉಪನಗರ, ಸಾಮಾನ್ಯ ವೇಗದೂತ ಬಸ್ ಗಳಲ್ಲಿ ರಾಜ್ಯಾದ್ಯಂತ ಪ್ರಯಾಣಿಸಲು ಅವಕಾಶ.
- ಬಸ್ ಪಾಸ್ ಪಡೆಯಲು ದೃಷ್ಟಿ ವಿಶೇಷಚೇತನರು ಜಿಲ್ಲಾ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣ ಪತ್ರ, 2 ಭಾವಚಿತ್ರ, ರೂ 5 ಪಾವತಿಸುವುದು.
- ಪಾಸನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಿ ನೀಡಲಾಗುವುದು,
- ದೃಷ್ಟಿ ವಿಶೇಷಚೇತನರ ಗುರುತಿನ ಚೀಟಿ / UDID
- ವಿಳಾಸದ ದೃಢೀಕರಣ
- ಮನವಿ ಪತ್ರ
ಸದರಿ ದಾಖಲಾತಿಗಳೊಂದಿಗೆ ಸೇವಾ ಸಿಂಧು ಆನ್ ಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಸ್ವೀಕೃತಿಯೊಂದಿಗೆ ಸಂಸ್ಥೆಯ ವಿಭಾಗೀಯ ಕಛೇರಿಗೆ ಸಂಪರ್ಕಿಸುವುದು ಎಂದು “ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ”, ತನ್ನ ಪ್ರಕಟಣೆಯಲ್ಲಿ ಟ್ವೀಟ್ ಮೂಲಕ ತಿಳಿಸಿದೆ.
