- > ತಾಂತ್ರಿಕ ಜವಳಿಗೆ ಸಂಬಂಧಿಸಿದ ಕೋರ್ಸ್ಗಳನ್ನು ಪ್ರಾರಂಭಿಸಲು ಎನ್ ಐಟಿಗಳು ಸೇರಿದಂತೆ 5 ಶಿಕ್ಷಣ ಸಂಸ್ಥೆಗಳು
ಜವಳಿ ಸಚಿವಾಲಯದ ಕಾರ್ಯದರ್ಶಿ ನಿನ್ನೆ ನವದೆಹಲಿಯ ಉದ್ಯೋಗ ಭವನದಲ್ಲಿ ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಅಡಿಯಲ್ಲಿ 8 ನೇ ಸಶಕ್ತ ಕಾರ್ಯಕ್ರಮ ಸಮಿತಿ (ಇಪಿಸಿ) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯು ‘ತಾಂತ್ರಿಕ ಜವಳಿ ಕ್ಷೇತ್ರದಲ್ಲಿ ಉದಯೋನ್ಮುಖ ಆವಿಷ್ಕಾರಗಳಿಗೆ ಸಂಶೋಧನೆ ಮತ್ತು ಉದ್ಯಮಶೀಲತೆಗಾಗಿ ಅನುದಾನ’ ಯೋಜನೆಯಡಿ 4 ನವೋದ್ಯಮಗಳಿಗೆ ಅನುಮೋದನೆ ನೀಡಿದೆ ಮತ್ತು ಪ್ರತಿ ಸ್ಟಾರ್ಟ್ ಅಪ್ ಗೆ ಸುಮಾರು 50 ಲಕ್ಷ ರೂ.ಗಳ ಅನುದಾನವನ್ನು ಒದಗಿಸಿದೆ.
‘ತಾಂತ್ರಿಕ ಜವಳಿಯೊಂದಿಗೆ ಸಂಯೋಜಿತವಾಗಿರುವ ಶಿಕ್ಷಣ ಸಂಸ್ಥೆಗಳನ್ನು ಸಕ್ರಿಯಗೊಳಿಸುವ ಸಾಮಾನ್ಯ ಮಾರ್ಗಸೂಚಿಗಳ’ ಅಡಿಯಲ್ಲಿ ತಾಂತ್ರಿಕ ಜವಳಿಗಳಿಗೆ ಸಂಬಂಧಿಸಿದ ಕೋರ್ಸ್ ಗಳನ್ನು ಪ್ರಾರಂಭಿಸಲು 5 ಶಿಕ್ಷಣ ಸಂಸ್ಥೆಗಳಿಗೆ ಸುಮಾರು 20 ಕೋಟಿ ರೂ.ಗಳ ಅನುದಾನವನ್ನು ಸಮಿತಿ ಅನುಮೋದಿಸಿದೆ.

ಅನುಮೋದಿತ ಸ್ಟಾರ್ಟ್-ಅಪ್ ಯೋಜನೆಗಳು ಸಂಯುಕ್ತಗಳು, ಸುಸ್ಥಿರ ಜವಳಿ ಮತ್ತು ಸ್ಮಾರ್ಟ್ ಜವಳಿಗಳ ಪ್ರಮುಖ ಕಾರ್ಯತಂತ್ರದ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿವೆ.
ಅನುಮೋದಿತ ಶಿಕ್ಷಣ ಸಂಸ್ಥೆಗಳು ಜಿಯೋಟೆಕ್ಸ್ಟೈಲ್ಸ್, ಜಿಯೋಸಿಂಥೆಟಿಕ್ಸ್, ಕಾಂಪೋಸಿಟ್ಸ್, ಸಿವಿಲ್ ಸ್ಟ್ರಕ್ಚರ್ಸ್, ಇತ್ಯಾದಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮತ್ತು ತಾಂತ್ರಿಕ ಜವಳಿಗಳ ಅನ್ವಯಗಳಲ್ಲಿ ಹೊಸ ಬಿ.ಟೆಕ್ ಕೋರ್ಸ್‌ಗಳನ್ನು ಪರಿಚಯಿಸಲು ಪ್ರಸ್ತಾಪಿಸಿವೆ.
Source:PIB