Saturday, February 22, 2025
Homeಅಂಕಣಗಳುಜ್ಯೋತಿಷ್ಯ ಶಾಸ್ತ್ರದ ಹಿನ್ನಲೆ ಹಾಗೂ ಮಹತ್ವ: ವೇ.ಮೂ. ಮನೋಜಕುಮಾರ್ ಬಾಪಟ್.

ಜ್ಯೋತಿಷ್ಯ ಶಾಸ್ತ್ರದ ಹಿನ್ನಲೆ ಹಾಗೂ ಮಹತ್ವ: ವೇ.ಮೂ. ಮನೋಜಕುಮಾರ್ ಬಾಪಟ್.

ಜ್ಯೋತಿರ್ವಿಜ್ಞಾನಮ್

ಜ್ಯೋತಿಷ್ಯವು ಸಾಧಕನ ಸಾಧನವೇ ಹೋರತು ಅಂಧಶ್ರದ್ಧೆಯಲ್ಲಾ. ಅದೊಂದು ನೈಸರ್ಗಿಕ ವಿಶೇಷ ವಿಜ್ಞಾನ, ಅಗೋಚರವನ್ನು ಸ್ಪಸ್ಟವಾಗಿ ಉಹಿಸಬಲ್ಲ ತಿಳುವಳಿಕೆ. ಇದು ವೇದದ ರಕ್ಷಣಾಂಗವಾಗಿ ವೇದದ ಕಣ್ಣೆಂದು ಶಾಸ್ತ್ರವು ಸಾರುತ್ತಿದೆ, ಜ್ಯೋತಿಷ್ಯವು ವೇದದ ಷಡಂಗದಲ್ಲೊಂದು ಮೂರ್ಧನ್ಯವಾಗಿ ವಿಶೇಷವಾಗಿದೆ. ಋಗ್ವೇದದಲ್ಲಿ ಜ್ಯೋತಿಷ್ಯವನ್ನುʻಗಣಿತಂʼ ಎಂದು ಕರೆದಿದ್ದಾರೆ. ಹಾಗಾಗಿ ಇದು ವೇದದಷ್ಟೆ ಪುರಾತನ ಶಾಸ್ತ್ರವೆಂದರೆ ಅತಿಶಯವಲ್ಲಾ.

ಈ ಸೃಷ್ಟಿಯು ಅಗೋಚರನ ನಿರ್ಮಾಣ, ಸೃಷ್ಟಿಯ ನಿರ್ಮಾಣದ ಮೂಲ ತತ್ವಗಳು ಅಗ್ನಿ ಪೃಥ್ವಿ ಜಲ ವಾಯು ಮತ್ತು ಆಕಾಶಾದಿ ಪಂಚಭೂತಗಳು, ಈ ಪಂಚಭೂತಗಳ ಮೆಲಿನ ಪ್ರಭಾವಗಳ ಅಧಿಕಾರ ಸೂರ್ಯಾದಿ ಸಪ್ತ ಗ್ರಹಗಳಿಗಿದೆಯಂದು ಶಾಸ್ತ್ರದ ಸ್ಪಸ್ಟನೆ, ಇದಕ್ಕೆ ಪ್ರತ್ಯಕ್ಷ ಪ್ರಮಾಣ ಸೂರ್ಯಚಂದ್ರಾದಿಗಳ ಉದಯಾಸ್ತದಿಂದ ಸೃಷ್ಟಿಯಲ್ಲಿ ನಡೆಯುವ ವಿದ್ಯಮಾನಗಳು. ಭೂಮಿಯ ಮೇಲಿರುವ ಸಸ್ಯಗಳು ಪ್ರಾಣಿಗಳು ಮನುಷ್ಯ ವರ್ಗವು ಪಂಚಭೂತಮಯವಾಗಿದೆ. ಆದುದರಿಂದ ಗ್ರಹಗಳಿಗೂ ಮಾನವರಿಗೂ ಸಂಬಂಧ ಉಂಟಾಗಿ ಗ್ರಹಗಳ ಗತಿಯಿಂದ ಸುಖ ದುಃಖವನ್ನು ಉಹಿಸಬಹುದು.ಭೂತ ಭವಿಷ್ಯತ್ ವರ್ತಮಾನಗಳನ್ನು ಅಧ್ಯಯಿನಿಸಬಹುದು,

ಜ್ಯೋತಿಷ್ಯಾಸ್ತ್ರದ ಪ್ರವರ್ತಕರು ಸೂರ್ಯ ವ್ಯಾಸ ವಸಿಷ್ಠ ಪಿತಾಮಹ ಅತ್ರಿ ಪರಾಶರ ಕಾಶ್ಯಪ ನಾರದ ಗರ್ಗ ಮರಿಚಿ ಮನು ಲೋವಶ ಪೌಲಷ ಯವನ ಚವನ ಬೃಗು ಶೌನಕ ಮುಂತಾದವರು.ಈ ಏಲ್ಲ ಮಹರ್ಷಿಗಳ ಅಧ್ಯಯನದ ಆಧಾರದ ಮೇಲೆ ವರಾಹಮಿಹಿರ ಕಾಳಿದಾಸ ವರರುಚಿ ವೇಂಕಟೇಶ ಕಶ್ಯಪನೀಲಕಂಠ ಜಯದೇವ ಗಣಪತಿ ಬ್ರಹ್ಮದೇವ ಭಾಸ್ಕರಾಚಾರ್ಯ ಗಣಪತಿ ಆರ್ಯಭಟ್ ಮೊದಲಾದವರು ಜ್ಯೋತಿಷ್ಯಕ್ಕೆ ಸಿದ್ಧಾಂತ ತಂತ್ರಗ್ರಂಥಗಳನ್ನ ರಚಿಸಿದ್ದಾರೆ.

ಮಾನವ ಜನ್ಮ ಕೇವಲ ಉಂಡುಟ್ಟು ರಮಿಸಿ ನಶಿಸಲಲ್ಲಾ, ಬದಲಿಗೆ ʻಮಾನವ ಜನ್ಮ ದೋಡ್ಡದು ಹಾಳುಮಾಡಲು ಬೇಡಿರೋ ಹುಚ್ಚಪ್ಪಗಳಿರಾʼ ಎಂದು ಅನುಭವಿಕರ ಶ್ರೇಷ್ಠನುಡಿಯಿದು. ಕಾರಣ ಕ್ರಿಮಿಕೀಟಾದಿ 84 ಲಕ್ಷ ಜನನೇಂದ್ರೀಯಗಳಲ್ಲಿ ಜನಿಸಿದನಂತರ ಈ ಮಾನವ ಜನ್ಮದೊರೆತಿದೆಯಂದು ನಮ್ಮ ಋಷಿಮುನಿಗಳ ಸಂಶೋಧನೆ. ಆದ್ದರಿಂದ ಮಾನವ ಜನ್ಮವನ್ನು ಸಾರ್ಥಕಮಾಡಿಕೊಳ್ಳುವುದು ಅವಶ್ಯಕವಾಗಿದೆ, ಅದರಲ್ಲೂ ಭಾರತದೇಶದಲ್ಲಿ ಹುಟ್ಟುವುದು ಅವನ ವಿಶೇಷ ಪುಣ್ಯಫಲದಿಂದ. ಭೂಮಿಯಲ್ಲಿ ಜನಿಸಿದ ನಂತರ  “ಸಂಚಿತ ಪ್ರಾರಬ್ಧ ಆಗಾಮಿ” ಕರ್ಮಗಳನ್ನು ಅನುಭವಿಸಬೇಕು. ಈ ಕರ್ಮಗಳ ಮೇಲೆ  ಜ್ಯೋತಿಷ್ಯಾಸ್ತ್ರವು ಬೆಳಕನ್ನು ಚಲ್ಲುತ್ತದೆ, ಮುಂಬರುವ ಕಷ್ಟನಷ್ಟಾದಿಗಳನ್ನು ಶಾಸ್ತ್ರದ ಮೂಲಕ ತಿಳಿದು ಉಪಾಯಗಳನ್ನು ಸಿದ್ಧಪಡಿಸಬಹುದು, ಇದರ ಮೂಲಕ ಮನಃ ಶಾಂತಿಯನ್ನು ಪಡೆಯಬಹುದಾಗಿದೆ. ಆದ್ದರಿಂದ ಜ್ಯೋತಿಷ್ಯಾಸ್ತ್ರದ ಅವಶ್ಯಕತೆ ಪ್ರತಿ ಜೀವಿಗೂ ಅಮೂಲ್ಯ ವರದಾನವಾಗಬಲ್ಲದು.ಇದೊಂದು ದೈವೀಕ ವಿಜ್ಞಾನಶಾಸ್ತ್ರವಾಗಿರದೇ ಗಣಿತಾಧಾರಿತ ಶಾಸ್ತ್ರವೆಂದು ಸ್ಪಷ್ಟಿಕರಿಸಬಹುದು.

ಸನ್ಮಿತ್ರಃ

ವೇದಮೂರ್ತಿ ಮನೋಜಕುಮಾರ ಬಾಪಟ, Dip,in Vedatantragama. ಸಂಪರ್ಕಿಸುವ ಸಂಖ್ಯೆ:(Only WhatsApp) 8880009290.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news