- ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸಭೆ
- ಜವಳಿ ಮೇಲಿನ ತೆರಿಗೆಯಥಾಸ್ಥಿತಿಗೆ ಜಿಎಸ್ ಟಿ ಮಂಡಳಿ ನಿರ್ಧಾರ
- ಇಂದಿನ ತುರ್ತು ಸಭೆಯ ಕಾರ್ಯಸೂಚಿ ತೆರಿಗೆ ಸ್ವರೂಪದಲ್ಲಿನ ಏರುಪೇರುಗಳನ್ನು ಸರಿಪಡಿಸುವುದಾಗಿತ್ತು
ನವದೆಹಲಿ: ಜವಳಿ ಮೇಲಿನ ತೆರಿಗೆ ದರವನ್ನು ಈ ಹಿಂದೆ ಯೋಜಿಸಿದಂತೆ ಶೇಕಡ 12ರಷ್ಟು ಹೆಚ್ಚಿಸದಿರಲು ನಿರ್ಧರಿಸಿದ್ದು, ಶೇಕಡ 5ರಷ್ಟು ತೆರಿಗೆ ದರ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ತುರ್ತು ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜವಳಿ ಮೇಲಿನ ತೆರಿಗೆ ಯಾಥಾಸ್ಥಿತಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಜಿಎಸ್ ಟಿ ತೆರಿಗೆ ದರಗಳ ತರ್ಕಬದ್ಧತೆಯನ್ನು ಪರಿಶೀಲಿಸಲು ರಾಜ್ಯಗಳ ಸಚಿವರ ಗುಂಪಿನ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಫೆಬ್ರವರಿ ಅಂತ್ಯದಲ್ಲಿ ಸಮಿತಿ ವರದಿ ಸಲ್ಲಿಸಲಿದೆ ಎಂದು ವಿವರಿಸಿದರು. ಇಂದಿನ ತುರ್ತು ಸಭೆಯ ಕಾರ್ಯಸೂಚಿ ತೆರಿಗೆ ಸ್ವರೂಪದಲ್ಲಿನ ಏರುಪೇರುಗಳನ್ನು ಸರಿಪಡಿಸುವುದಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
“ಸರ್ಕಾರದ ಕೋವಿಡ್-19 ಸೋಂಕು ನಿಯಂತ್ರಣ ನಿಯಮಗಳನ್ನು ಪಾಲಿಸಿ, ಇದು ಸ್ಕೈ ನ್ಯೂಸ್ RTWT ಕಳಕಳಿ “