ಸಂಕ್ಷಿಪ್ತ ಸುದ್ದಿ:
ಗದಗ: ಜಿಲ್ಲೆಯಾದ್ಯಂತ ಮಾನ್ಯ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಅವರು, ಕೈಗಾರಿಕಾ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ, ಗದಗ ನಗರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ನಟ್ಸ್ & ಬೊಲ್ಟ್ಸ್ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿ, ವಿಕ್ಷಣೆ ನಡೆಸಿದರು, ಈ ಸಂದರ್ಭದಲ್ಲಿ ಕಾರ್ಖಾನೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಾಜರಿದ್ದರು.

ಗದಗ ಪಟ್ಟಣದ ಎಪಿಎಂಸಿ ಹತ್ತಿರದಲ್ಲಿರುವ ಕಡಲೆ, ಹೆಸರು ಹಾಗೂ ಇತರೆ ಧಾನ್ಯಗಳ ಸಂಸ್ಕರಣಾ ಘಟಕಕ್ಕೆ ಮಾನ್ಯ ಸಚಿವರು ಭೇಟಿ ನೀಡಿ, ವಿಕ್ಷಣೆ ಮಾಡಿದರು. ನಂತರ, ಅಲ್ಲಿರುವ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.



ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ, ಜಿಲ್ಲೆಯ ಕೈಗಾರಿಕಾ ಪ್ರದೇಶದ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.

