- ಸಾಮಾಜಿಕ ಆಚರಣೆ / ಸಮಾರಂಭಗಳು
- ಮದುವೆ
- ಜನ್ಮದಿನ ಹಾಗೂ ಇತರೆ ಆಚರಣೆಗಳು
- ನಿಧನ / ಶವಸಂಸ್ಕಾರ
- ಅಂತ್ಯಕ್ರಿಯೆ
- ಇತರೆ ಸಮಾರಂಭಗಳು
- ಧಾರ್ಮಿಕ ಆಚರಣೆಗಳು / ಸಮಾರಂಭಗಳು
- ರಾಜಕೀಯ ಆಚರಣೆಗಳು / ಸಮಾರಂಭಗಳು, ಇವುಗಳಿಗೆ ಸಂಬಂಧಸಿದಂತೆ ಜನ ದಟ್ಟಣೆ ಮಿತಿ ಹಾಗೂ ಇತರೆ ಷರಾಗಳನ್ನು ಸೂಚಿಸಿ, ಅನುಸರಿಸಬೇಕಾದ ಕ್ರಮಗಳನ್ನು ಮತ್ತು ಆದೇಶ ಪಾಲನೆಯಲ್ಲಿ ಲೋಪವೆಸಗುವಂತಹವರ ವಿರುದ್ಧದ ಕ್ರಮಗಳನ್ನು ತಿಳಿಸಿ, ಏಪ್ರೀಲ್ 30 ವರೆಗೆ ಜಾರಿಯಲ್ಲಿರುವಂತೆ ಆದೇಶಿಸಲಾಗಿದೆ.


“ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆ–ಸಮಾರಂಭಗಳಲ್ಲಿ ಸೇರಬಹುದಾದ ಜನಸಂದಣಿ ಮೇಲೆ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಕಲ್ಯಾಣ ಮಂಟಪ, ಪಾರ್ಟಿ ಹಾಲ್, ಹೋಟೆಲ್, ರೆಸಾರ್ಟ್ ಮಾಲೀಕರು, ಸಭೆ–ಸಮಾರಂಭಗಳ ಆಯೋಜಕರು ಹಾಗೂ ಸಾರ್ವಜನಿಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.” _ ಡಾ. ಕೆ ಸುಧಾಕರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು.