ಕೋವಿಡ್-19: ನಿಯಂತ್ರಣ ಸಂಬಂಧಿತ ಕೆಲಸದಲ್ಲಿ ಮೃತರಾದರೆ 30 ಲಕ್ಷ ರೂ. ಪರಿಹಾರದ ಆದೇಶ!

0
386
  • ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕರು.
  • ಪೊಲೀಸ್‌ ಅಧಿಕಾರಿಗಳು/ಸಿಬ್ಬಂದಿ, ಹೋಮ್‌ ಗಾರ್ಡ್ ಗಳು, ಪೌರರಕ್ಷಣಾ ದಳ.
  • ಅಗ್ನಿಶಾಮಕ ದಳದ ನೌಕರರು/ಅಧಿಕಾರಿಗಳು, ಬಂಧಿಖಾನೆ ಸಿಬ್ಬಂದಿ.
  • ಪೌರಕಾರ್ಮಿಕರು/ಸ್ಯಾನಿಟೈಸರ್‌ ಕೆಲಸಗಾರರು, ಅವರಿಗೆ ಸಂಬಂಧಿಸಿದ ಚಾಲಕರು/ಲೋಡರ್ ಗಳು.
  • ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ಮಾರ್ಗಸೂಚಿಯಂತೆ ಮಂಜೂರಾತಿ.
  • ಸರ್ಕಾರದ ಕಾರ್ಯದರ್ಶಿ(ಆ ಮತ್ತು ಸಂ.) ಆರ್ಥಿಕ ಇಲಾಖೆ ನಡುವಳಿಕೆ-ಆದೇಶ.

ಬೆಂಗಳೂರು: ಕೋವಿಡ್-‌19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಂಬಂಧ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕರು, ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳು,  ಹೋಮ್‌ ಗಾರ್ಡ್ಸ್‌ , ಪೌರ ರಕ್ಷಣಾದಳ,  ಅಗ್ನಿಶಾಮಕ ದಳದ ನೌಕರರು/ಸಿಬ್ಬಂದಿಗಳು,  ಬಂಧಿಖಾನೆ ಸಿಬ್ಬಂದಿಗಳು,  ಪೌರಕಾರ್ಮಿಕರು/ಸ್ಯಾನಿಟೈಸರ್‌ ಕೆಲಸಗಾರರು/ ಅವರಿಗೆ ಸಂಬಂಧಿಸಿದ ವಾಹನಗಳ ಚಾಲಕರು/ಲೋಡರ್‌ ಗಳು ರವರನ್ನು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣಯೋಜನೆಯಂತೆ

1.ಕೋವಿಡ್-‌19 ದಿಂದ ಮೃತರಾದಲ್ಲಿ

2.ಕೋವಿಡ್-‌19 ಕಾರ್ಯದಲ್ಲಿ ತೊಡಗಿದ್ದಾಗ ಮೃತರಾದಲ್ಲಿ ರೂ.50 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಪ್ರಸ್ತಾವನೆಯನ್ನು ಪರಿಶಿಸಿಲಿದ ಸರ್ಕಾರ, ಕೋವಿಡ್-‌19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಂಬಂಧ ಕೆಲಸವನ್ನು ಮಾಡುವಾಗ

ಅ. ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕರು,

ಆ. ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳು,  ,  ಹೋಮ್‌ ಗಾರ್ಡ್ಸ್‌ , ಪೌರ ರಕ್ಷಣಾದಳ, ಅಗ್ನಿಶಾಮಕ ದಳದ ನೌಕರರು/ಸಿಬ್ಬಂದಿಗಳು, ಬಂಧಿಖಾನೆ ಸಿಬ್ಬಂದಿಗಳು,  

ಇ. ಪೌರಕಾರ್ಮಿಕರು/ಸ್ಯಾನಿಟೈಸರ್‌ ಕೆಲಸಗಾರರು/ ಅವರಿಗೆ ಸಂಬಂಧಿಸಿದ ವಾಹನಗಳ ಚಾಲಕರು/ಲೋಡರ್‌ ಗಳು,

          ಈ ಮೂರು ವರ್ಗಗಳಿಗೆ  ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳಂತೆ ಕೋವಿಡ್‌ ಕೆಲಸದಲ್ಲಿ ಪಾಲ್ಗೊಂಡಿದ್ದು, ಕೋವಿಡ್-‌19  ರೋಗದಿಂದ ಮೃತರಾದಲ್ಲಿಈ ಕೆಲಸದಲ್ಲಿರುವವರಿಗೆ ಮನೋಸ್ಥೈರ್ಯ  ಹೆಚ್ಚಿಸಲು  ರೂ. 30  ಲಕ್ಷ ಪರಿಹಾರ ಒದಗಿಸಲು ಸರ್ಕಾರವು ಮಂಜೂರಾತಿ ನೀಡಿ ದಿನಾಂಕ 02-05-2020 ರಂದು ಆದೇಶಿಸಿದೆ, ಎಂದು  ಕರ್ನಾಟಕ ವಾರ್ತೆ ಟ್ವೀಟ್‌ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ನಡುವಳಿಕೆ/ ಆದೇಶ ಪ್ರತಿಯನ್ನು ಲಗತ್ತಿಸಿದೆ.

LEAVE A REPLY

Please enter your comment!
Please enter your name here