ದೇಶದ ಆರ್ಥಿಕ ಬೆಳವಣಿಗೆಗೆ ಪ್ರಮುಖ ವಲಯವಾಗಿರುವ ಕೃಷಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಇಂದಿನ ಬಜೆಟ್ ನಲ್ಲಿ ಒತ್ತು ನೀಡಲಾಗಿದ್ದು ಒಟ್ಟು 33,700 ಕೋಟಿ ರೂ. ಒದಗಿಸಲಾಗಿದೆ. ಕೃಷಿ ಮೀನುಗಾರಿಕೆ ಪಶುಸಂಗೋಪನೆಯ ಅಭಿವೃದ್ದಿಗೆ ವಿವಿಧ ಯೋಜನೆಗಳನ್ನು ಪ್ರಕಟಿಸಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳಲ್ಲಿ ಘೊಷಿಸಲಾಗಿರುವ ಪ್ರಮುಖ ಅಂಶಗಳ ಇಣುಕು ನೋಟ.

* ರೈತರ ಕೃಷಿಗೆ ಡೀಸೆಲ್ ಸಹಾಯಧನ ನೀಡಲು ರೈತಶಕ್ತಿ ಯೋಜನೆಯಡಿ 500 ಕೋಟಿ ರೂ.
* ರಾಜ್ಯದ ಎಲ್ಲಾ ಹೋಬಳಿಗಳಿಗೆ ಕೃಷಿ ಯಂತ್ರಧಾರೆ ಕೇಂದ್ರಗಳ ವಿಸ್ತರಣೆ
* ಕೆಪೆಕ್ ಮೂಲಕ ಕೋಯ್ಲಿನೋತ್ತರ ಕೃಷಿ ಉತ್ಪನ್ನಗಳ ಮಾರಾಟ ಮತ್ತು ರಫ್ತಿಗೆ 50 ಕೋಟಿ ರೂ.
* ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್ ಗಳ ಸ್ಥಾಪನೆ
* ಕೃಷಿ – ತೋಟಗಾರಿಕಾ ವಿಶ್ವವಿದ್ಯಾಲಯಗಳ ಮೂಲಕ 1 ಸಾವಿರ ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಅಧ್ಯಯನ
* 51 ತಾಲೂಕುಗಳಲ್ಲಿ 2 ಲಕ್ಷದ 75 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ 641 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಾರಿ
* ಬಳ್ಳಾರಿ ಜಿಲ್ಲೆ ಹಗರಿ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಹೊಸಕೃಷಿ ಕಾಲೇಜು ಸ್ಥಾಪನೆ
* ಕಲಬುರಗಿ, ಯಾಧಗಿರಿ ಜಿಲ್ಲೆಯಲ್ಲಿ ಬೆಳೆಯುವ ‘ತೊಗರಿಬೇಳೆ, ಭೀಮಾ ಪಲ್ಸ್’ ಬ್ರ್ಯಾಂಡ್ ನಡಿ ಮಾರಾಟ
* ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸಲು ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ ಪ್ರದಾನ
* ಬೆಂಗಳೂರಿನ ಯಲಹಂಕ ಬಳಿ 300 ಎಕರೆ ಜಮೀನಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನ ನಿರ್ಮಾಣ
* ತೋಟಾಗಾರಿಗಾ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲು ಸಹಾಯಧನ ಮೊತ್ತ ಹೆಚ್ಚಳ
* ಖಾದ್ಯ ತೈಲ, ತಾಳೆ ಎಣ್ಣೆ ಬೆಳೆಗಳ ವ್ಯಾಪ್ತಿ 5 ವರ್ಷಗಳಲ್ಲಿ 25 ಸಾವಿರ ಹೆಕ್ಟೇರ್ ಗೆ ಹೆಚ್ಚಸುವ ಗುರಿ
* ಮೆಣಸು ಮತ್ತು ಇತರ ಸಾಂಬಾರ ಪದಾರ್ಥಗಳ ಗುಣಮಟ್ಟ ಹೆಚ್ಚಳಕ್ಕೆ ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ
* ಹಾನಗಲ್ ನಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಉತ್ತೇಜನ
* ಕೊಡಗು ಜೇನುತುಪ್ಪ ಜನಪ್ರಿಯಗೊಳಿಸಿ ಜಾಗತಿಕ ಮಟ್ಟಕ್ಕೇರಿಸಲು 5 ಕೋಟಿ ರೂಪಾಯಿ
* ಪ್ರತಿ ಟನ್ ದ್ವಿತಳಿ ರೇಷ್ಮೆ ಗೂಡಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ
* ದ್ವಿತಳಿ ರೇಷ್ಮೆ ಮೊಟ್ಟೆ ಉತ್ಪಾದಿಸಿ ಶೇತ್ಯೀಕರಿಸಲು ಮದ್ದೂರು, ರಾಣಿಬೆನ್ನೂರು, ದೇವನಹಳ್ಳಿಯಲ್ಲಿ ಶೈತ್ಯಾಗಾರಗಳ ನಿರ್ಮಾಣ
* ಕಲಬುರಗಿ, ಹಾವೇರಿ ಜಿಲ್ಲೆಯಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
* ದ್ವಿತಳಿ ರೇಷ್ಮೆ ಗೂಡಿಗೆ ಪ್ರೋತ್ಸಾಹಧನ ಪ್ರತಿ ಕೆ.ಜಿ.ಗೆ 50 ರೂಪಾಯಿ ಹೆಚ್ಚಳ
* ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಇ-ವೈಟ್ ಮೆಂಟ್ ಹಾಗೂ ಇ-ಪೇಮೆಂಟ್ ಅನುಷ್ಠಾನ
* ನೂತನ 100 ಪಶು ಚಿಕಿತ್ಸಾಲಯಗಳ ಸ್ಥಾಪನೆ : ಖಾಲಿಯಿರುವ 400 ಪಶು ವೈದ್ಯಾಧಿಕಾರಿ ಹುದ್ದೆಗಳ ಭರ್ತಿ
* ಹಾಲು ಉತ್ಪಾದಕರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ
* ಹಾವೇರಿ ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ
* ಗೋ ಶಾಲೆಗಳ ಸಂಖ್ಯೆ 100ಕ್ಕೆ ಏರಿಕೆ: ಗೋ ಶಾಲೆಗಳಲ್ಲಿನ ಗೋವುಗಳನ್ನು ದತ್ತು ಪಡೆಯಲು ಪುಣ್ಯಕೋಟಿ ದತ್ತು ಯೋಜನೆ ಆರಂಭ
* ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕವಾಗಿ ಸಾವನ್ನಪ್ಪುವ ಕುರಿ, ಮೇಕೆಗಳಿಗೆ ಪರಿಹಾರ ಧನ 3 ಸಾವಿರದ 500 ರೂಪಾಯಿಗೆ ಏರಿಕೆ
* ಕರಾವಳಿಯಲ್ಲಿ 100 ಆಳ ಸಮುದ್ರ ಮೀನುಗಾರಿಕೆ ದೋಣಿಗಳಿಗೆ ಮತ್ಸ್ಯ ಸಿರಿ ವಿಶೇಷ ಯೋಜನೆ
* ಯಶಸ್ವಿನಿ ಯೋಜನೆಗೆ 300 ಕೋಟಿ ರೂ. ಅನುದಾನ
* 2022-23ನೇ ಸಾಲಿನಲ್ಲಿ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಣೆ ಗುರಿ
* ಎತ್ತಿನಹೊಳೆ ಯೋಜನೆಯ ಪ್ರಥಮ ಹಂತದ ಕಾಮಗಾರಿಗಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರಾಯೋಗಿಕ ಚಾಲನೆ
* ಮೇಕೆದಾಟು ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 1ಸಾವಿರ ಕೋಟಿ ರೂ. ಅನುದಾನ
* ಕಾಳೀ ನದಿಯ ನೀರನ್ನು ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಪೂರೈಸುವ ಯೋಜನೆ
* ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ವೆಚ್ಚ
* ಬೆಂಗಳೂರು ನಗರದ ವೃಷಭಾವತಿ ಕಣಿವೆಯ ಸಂಸ್ಕರಿಸಿದ ನೀರು, ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ತುಂಬಿಸುವ ಯೋಜನೆಗೆ ಮೊದಲ ಹಂತದಲ್ಲಿ 865 ಕೋಟಿ ರೂ.
* ಕೆ.ಸಿ. ವ್ಯಾಲಿ ಯೋಜನೆಯ ಎರಡನೇ ಹಂತಕ್ಕೆ 455 ಕೋಟಿ ರೂ. ಅನುಮೋದನೆ
* ಕೃಷಿ ವಲಯಕ್ಕೆ 2022-23 ನೇ ಸಾಲಿನಲ್ಲಿ ಒಟ್ಟಾರೆ 33 ಸಾವಿರದ 700 ಕೋಟಿ ರೂ. ಅನುದಾನ