ಸಂಕ್ಷಿಪ್ತ ಸುದ್ದಿ:
ನಿನ್ನೆ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದೊಂದಿಗೆ ವಿವಿಧ ವಿಷಯಗಳ ಕುರಿತು ಸಭೆ ನಡೆಸಲಾಯಿತು. ಸಭೆಯಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ. ಸಿ. ಅಶ್ವತ್ಥನಾರಾಯಣ, ಮಾನ್ಯ ಆರೋಗ್ಯ ಸಚಿವರಾದ ಬಿ. ಶ್ರೀ ರಾಮುಲು ಅವರು ಉಪಸ್ಥಿತರಿದ್ದರು. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ವೈದ್ಯರ ವೇತನ ಪರಿಷ್ಕರಣೆ ಹಾಗೂ ಇನ್ನಿತರ ಮನವಿಗಳ ಕುರಿತು ಮಾನ್ಯ ಆರೋಗ್ಯ ಸಚಿವರಾದ ಬಿ. ಶ್ರೀ ರಾಮುಲು ಅವರ ಜೊತೆ ಸರ್ಕಾರಿ ವೈದ್ಯರ ನಿಯೋಗದೊಂದಿಗೆ ಸಭೆ ನಡೆಸಿದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ. ಸಿ. ಅಶ್ವತ್ಥನಾರಾಯಣ ಅವರು ಸದರಿ ವಿಷಯವಾಗಿ ಕೂಲಂಕಷ ಚರ್ಚೆ ನಡೆಸಿದ್ದೇವೆ. ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಈ ಕುರಿತು ಚರ್ಚಿಸಿ ಮುಂದಿನ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಚರ್ಚಿಸಲಾಯಿತು.
