ಚುನಾವಣೆ ಬಾಕಿಯಿರುವ ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತಿನಲ್ಲಿ ಮಹಿಳೆಯರಿಗೆ ಶೇಕಡ 30ರಷ್ಟು ಪ್ರಾತಿನಿಧ್ಯ ನೀಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ, ವಕೀಲರ ಪರಿಷತ್ತುಗಳಲ್ಲಿ, ಸೂಕ್ತ ಮಹಿಳಾ ವಕೀಲರ ಪ್ರಾತಿನಿಧಿತ್ವ ಇಲ್ಲದಿರುವುದನ್ನು ಮನಗಂಡು, ಈ ಆದೇಶ ನೀಡಿದೆ. ಮಹಿಳೆಯರಿಗೆ ಶೇಕಡ 20ರಷ್ಟು ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಮತ್ತು ನಾಮ ನಿರ್ದೇಶನದ ಮೂಲಕ ಶೇಕಡ 10ರಷ್ಟು ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ನ ಈ ತೀರ್ಪು, ಅತ್ಯಂತ ಮಹತ್ವದ್ದಾಗಿದ್ದು, ಇದರಿಂದ ನ್ಯಾಯಾಂಗದಲ್ಲಿ ಸಮಾನತೆ ಸಾಧಿಸುವ ನಿಟ್ಟಿನಲ್ಲಿ, ಸಹಕಾರಿಯಾಗಲಿದೆ ಎಂದು ಸುಪ್ರೀಂ ಕೋರ್ಟ್ ನ ಮಹಿಳಾ ಹಿರಿಯ ನ್ಯಾಯವಾದಿಗಳು ಹೇಳಿದ್ದಾರೆ.


