ಬೆಂಗಳೂರು:ಉಚಿತ ಪ್ರಯಾಣದ ಅವಧಿಯನ್ನು ಮತ್ತೆ ಎರಡು ದಿನ ವಿಸ್ತರಣೆ ಮಾಡಲಾಗಿದೆ.
ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಭಾನುವಾರದಿಂದ ಸರ್ಕಾರ ಆರಂಭಿಸಿದ್ದ ಉಚಿತ ಬಸ್ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ.
ನಿನ್ನೆ ಎರಡು ರೈಲುಗಳು ಬಿಹಾರದ ಪಾಟ್ನಾ, ಜಾರ್ಖಂಡ್ ನ ರಾಂಚಿ ಮತ್ತು ಒಡಿಸ್ಸಾದ ಭುವನೇಶ್ವರಕ್ಕೆ ಒಟ್ಟು ನಾಲ್ಕು ರೈಲುಗಳಲ್ಲಿ 4800 ಪ್ರಯಾಣಿಕರನ್ನು ಕರೆದೊಯ್ದಿವೆ ಎಂದು ತಿಳಿಸಿದ ಸಿ.ಎಮ್. ಯಡಿಯೂರಪ್ಪ, ಇಂದು ಮತ್ತೆರಡು ರೈಲುಗಳು ರಾಜಸ್ಥಾನದ ಜೈಪುರ, ಬಿಹಾರದ ಪಾಟ್ನಾಕ್ಕೆ ಹೊರಡಲಿವೆ, ಪ್ರಯಾಣಕ್ಕಿಂತ ಮುಂಚೆ ಎಲ್ಲಾ ಜನರಿಗೂ ಉಚಿತ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.