ಇತ್ತೀಚಿನ – ಹೊಸತು – ರಾಷ್ಟ್ರೀಯ – ರಾಜಕೀಯ
- ಭಾರತ ಸರ್ಕಾರವು ಐಪಿಎಸ್ ದಿನಕರ್ ಗುಪ್ತಾ ಅವರನ್ನು (NIA) ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮಹಾನಿರ್ದೇಶಕರನ್ನಾಗಿ ನೇಮಿಸಿದೆ.
- “ಇಂಟೆಲಿಜೆನ್ಸ್ ಬ್ಯೂರೋದಲ್ಲಿ ವಿಶೇಷ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಸ್ವಾಗತ್ ದಾಸ್ ಅವರನ್ನು ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ಹುದ್ದೆಗೆ ಭಾರತ ಸರ್ಕಾರ ನೇಮಿಸುತ್ತದೆ.”_ ಗೃಹ ವ್ಯವಹಾರಗಳ ಸಚಿವಾಲಯ
- ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹೆಚ್ಚಿನ ಪಾಸಿಟೀವ್ ಪ್ರಕರಣಗಳ ವರದಿ ಮಾಡುವ ಜಿಲ್ಲೆಗಳ ಮೇಲೆ ಕೇಂದ್ರೀಕರಿಸಲು ಅವರು ಒತ್ತಿಹೇಳಿದರು ಮತ್ತು ಹೆಚ್ಚಿನ ಪ್ರಮಾಣದ RTPCR ಪರೀಕ್ಷೆಗಳೊಂದಿಗೆ ಸಾಕಷ್ಟು ಪರೀಕ್ಷೆಯನ್ನು ಕೈಗೊಳ್ಳಲು ಹಾಗೂ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸುವುದರ ಜೊತೆಗೆ ಯಾವುದೇ ಸಂಭವನೀಯ ರೂಪಾಂತರಕ್ಕಾಗಿ ಸ್ಕ್ಯಾನ್ ಮಾಡಲು ಕಣ್ಗಾವಲು ಮತ್ತು ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ (ಡಬ್ಲ್ಯೂಜಿಎಸ್) ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸಲು ಕೇಂದ್ರ ಆರೋಗ್ಯ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು: MoHFW
- Pramerica Life Insurance Ltd ಭಾರತೀಯ ಸೇನೆಗೆ CSR ಬೆಂಬಲವನ್ನು ವಿಸ್ತರಿಸಿದೆ. ಆಶಾ ಶಾಲೆಗಳಿಗೆ ಮತ್ತು ವಿವಿಧ ಕಲ್ಯಾಣ ಯೋಜನೆಗಳಿಗೆ ನೆರವು ನೀಡಲು ಬೆಂಬಲವನ್ನು ಬಳಸಿಕೊಳ್ಳಲಾಗುತ್ತದೆ.
- ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರ ಅಧಿಕಾರಾವಧಿಯನ್ನು ಮೂರು ತಿಂಗಳು ಅಥವಾ ಹೊಸ ನಿರ್ದೇಶಕರ ನೇಮಕದವರೆಗೆ, ಯಾವುದು ಮೊದಲೋ ಅದನ್ನು ವಿಸ್ತರಿಸಲಾಗಿದೆ.
- ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕರ್ನಾಟಕ ರಾಜ್ಯ ಶಾಖೆಗೆ ಎನ್‌ಟಿಟಿ ಡೇಟಾ ಮತ್ತು ಐಎಫ್‌ಆರ್‌ಸಿ ಕೊಡುಗೆಯಾಗಿ ನೀಡಿರುವ ಸಂಚಾರಿ ರಕ್ತ ಸಂಗ್ರಹಣೆ ಹಾಗೂ ಸಂಚಾರಿ ಕೋವಿಡ್ ಪರೀಕ್ಷೆ ಮಾಡುವ ನೂತನ ವಾಹನಗಳಿಗೆ ಬೆಂಗಳೂರಿನಲ್ಲಿಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಸಿರು ನಿಶಾನೆ ತೋರಿದರು.
- ದೆಹಲಿಗೆ ಇಂದಿನಿಂದ 2 ದಿನಗಳ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.
- ಮುಂಬರುವ ಚಳಿಗಾಲದಲ್ಲಿ ಮಾಲಿನ್ಯ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಅಕ್ಟೋಬರ್ 1, 2022 ರಿಂದ ಫೆಬ್ರವರಿ 28, 2023 ರವರೆಗೆ ಮಧ್ಯಮ ಮತ್ತು ಭಾರೀ ವಾಹನಗಳ ಪ್ರವೇಶವನ್ನು ದೆಹಲಿಯಲ್ಲಿ ನಿಷೇಧಿಸಿದೆ.
- ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೊಸ ಕ್ಯಾಂಪಸ್ – ‘ವಾಣಿಜ್ಯ ಭವನ’ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಫ್ತು (NIRYAT) (ರಾಷ್ಟ್ರೀಯ ಆಮದು-ರಫ್ತು ವಾರ್ಷಿಕ ವ್ಯಾಪಾರ ವಿಶ್ಲೇಷಣೆ ದಾಖಲೆ) ಹೊಸ ಪೋರ್ಟಲ್ ಗೂ ಸಹ ಚಾಲನೆ ನೀಡಿದರು.
- ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಜೂನ್ 25 ರಂದು ಹಿಮಾಚಲ ಪ್ರದೇಶದ ಕುಲುವಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.
- ಸೋನಿಯಾ ಗಾಂಧಿಯವರು ಕುಮಾರಿ ಶೆಲ್ಜಾ, ಅಭಿಷೇಕ್ ಮನು ಸಿಂಘ್ವಿ ಅವರನ್ನು CWC ಸದಸ್ಯರನ್ನಾಗಿ ನೇಮಿಸಿದ್ದಾರೆ.
- ಪ್ರೌಢ ಶಿಕ್ಷಣ ಇಲಾಖೆ, ಅಸ್ಸಾಂ ಸರ್ಕಾರವು ಎಲ್ಲಾ ಪ್ರಾಥಮಿಕ, ಮಾಧ್ಯಮಿಕ, ಹಿರಿಯ ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಬೇಸಿಗೆ ರಜೆಯನ್ನು 25ನೇ ಜೂನ್ 2022 ರಿಂದ 25ನೇ ಜುಲೈ 2022 ಕ್ಕೆ ಮರುಹೊಂದಿಸಿದೆ.
CLICK to Follow on GoogleNews