- ಅಂತಾರಾಷ್ಟ್ರೀಯ ಮಾನವಸಹಿತ ಗಗನಯಾನ ದಿನವನ್ನು ಇಂದು ಆಚರಿಸಲಾಗುತ್ತಿದೆ. 1961ರ ಏಪ್ರಿಲ್ 12ರಂದು ರಷ್ಯಾದ ಬಾಹ್ಯಾಕಾಶ ವಿಜ್ಞಾನಿ ಯೂರಿ ಗಗರಿನ್ ಅವರು ಗಗನಯಾನ ಕೈಗೊಂಡ ಸ್ಮರಣಾರ್ಥ ಪ್ರತಿ ವರ್ಷ ಈ ದಿನಾಂಕದಂದು ಗಗನಯಾನ ದಿನ ಆಚರಿಸಲಾಗುತ್ತಿದೆ.
- 2026 ರ ಕ್ರೀಡಾಕೂಟವು ಪ್ರಮುಖ ಬಹು-ಕ್ರೀಡಾ ಸ್ಪರ್ಧೆಯ 23 ನೇ ಆವೃತ್ತಿಯಾಗಿದೆ, ಇದು ಮೊದಲು 1930 ರಲ್ಲಿ ಕೆನಡಾದ ಹ್ಯಾಮಿಲ್ಟನ್‌ನಲ್ಲಿ ಪ್ರಾರಂಭವಾಯಿತು. 2022 ರ ಕಾಮನ್‌ವೆಲ್ತ್ ಕ್ರೀಡಾಕೂಟವು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ.
- ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ಕೋವಿಡ್-19 ನ ಹೊಸ ‘XE ರೂಪಾಂತರ’ ಕುರಿತು ದೇಶದ ಉನ್ನತ ತಜ್ಞರೊಂದಿಗೆ ಸಭೆ ನಡೆಸಿದರು. ಹೊಸ ರೂಪಾಂತರಗಳನ್ನು ಅಧ್ಯಯನ ಮಾಡಲು ಕಣ್ಗಾವಲು ವ್ಯವಸ್ಥೆಗಳನ್ನು ಬಲಪಡಿಸುವ ಕುರಿತು ಚರ್ಚೆಗಳು ನಡೆದವು.
- ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಹೊಸ ಪಠ್ಯ ಕ್ರಮ ಅಳವಡಿಸುವುದಿಲ್ಲ. ಆದರೆ ಪಠ್ಯದಲ್ಲಿ ಕೆಲವು ಬದಲಾವಣೆ ಮಾಡಲಾಗುವುದು – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್
- ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಬಠುವಾ ಗ್ರಾಮದಲ್ಲಿ ನಿನ್ನೆ ರಾತ್ರಿ ರೈಲಿಗೆ ಸಿಲುಕಿ ಐವರು ಮೃತಪಟ್ಟಿದ್ದಾರೆ. ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
- ರಾಜ್ಯದ ಕರಾವಳಿ ಭಾಗದಲ್ಲಿ ಬೀಚ್ ಟೂರಿಸಂ ಮತ್ತು ಟೆಂಪಲ್ ಟೂರಿಸಂ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ’ಕರಾವಳಿ ನಿಯಂತ್ರಣ ವಲಯ – ಸಿಆರ್‌ಝೆಡ್’ ನಿಯಮಕ್ಕೆ ತಿದ್ದುಪಡಿ ತರುವ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
- ಭಾರತೀಯ ಕ್ರೀಡಾ ಪ್ರಾಧಿಕಾರವು 6 ಹಂತಗಳಲ್ಲಿ ಖೇಲೋ ಇಂಡಿಯಾ ರಾಷ್ಟ್ರೀಯ ರ‍್ಯಾಂಕಿಂಗ್ ಮಹಿಳಾ ಆರ್ಚರಿ ಪಂದ್ಯಾವಳಿ ನಡೆಸಲು 75 ಲಕ್ಷ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಿದೆ.
- ಟಾಟಾ ಆರ್ಚರಿ ಅಕಾಡೆಮಿಯು ಜಾರ್ಖಂಡ್‌ನ ಜೆಮ್‌ಷೆಡ್‌ಪುರದಲ್ಲಿ ಮೊದಲ ಹಂತದ ಪಂದ್ಯಾವಳಿ ಇಂದು ಆರಂಭಗೊಳ್ಳಲಿದೆ, ಪಂದ್ಯಾವಳಿಯು ವಿಶ್ವ ಬಿಲ್ಲುಗಾರಿಕೆ ನಿಯಮಗಳ ಪ್ರಕಾರ ಸೀನಿಯರ್, ಜೂನಿಯರ್ ಮತ್ತು ಕೆಡೆಟ್ ವಿಭಾಗಗಳಲ್ಲಿ ರಿಕರ್ವ್, ಕಾಂಪೌಂಡ್ ಪಂದ್ಯಗಳು ನಡೆಯಲಿವೆ ಎಂದು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ತಿಳಿಸಿದೆ.

- ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಇಲ್ಲ; ಆಯಾ ಹಾಲು ಒಕ್ಕೂಟ ತನ್ನ ಲಾಭಾಂಶದಲ್ಲಿ ರೈತರಿಗೆ ಪಾಲು ಕೊಡಬಹುದು, ಆದರೆ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ – ಸಹಕಾರ ಸಚಿವ ಎಸ್.ಟಿ. ಸೋಮಶೇಖರ್
- ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾಲಯದ 30ನೇ ನುಡಿಹಬ್ಬ ಇಂದು ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಹಾಗೂ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ
- ಕೋವಿಡ್-19 ಮಾದರಿ ಪರೀಕ್ಷೆ( 11-04-2022 ): ಒಟ್ಟು 79 ಕೋಟಿ 45 ಲಕ್ಷ 25 ಸಾವಿರದ 202, ನಿನ್ನೆ ಒಂದೇ ದಿನ 4 ಲಕ್ಷ 06 ಸಾವಿರದ 251 ಮಂದಿಯ ಮಾದರಿ ಪರೀಕ್ಷಿಸಲಾಗಿದೆ.
- ಪಾಕಿಸ್ತಾನದ 23ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಶಾಹಬಾಝ್ ಶರೀಫ್ ಪ್ರಮಾಣ ವಚನ ಸ್ವೀಕಾರ
