Saturday, January 4, 2025
Homeಇತರೆ ರಾಜ್ಯಗಳುಈ ಹೊತ್ತಿನ ಪ್ರಮುಖ ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು

  • ಪ್ರಧಾನಿ ನರೇಂದ್ರ ಮೋದಿ ಟ್ವೀಟ್: ಇಂದು ಸೋಮನಾಥ್ ಸರ್ಕ್ಯೂಟ್ ಹೌಸ್ ಕೂಡ ಉದ್ಘಾಟನೆಯಾಗುತ್ತಿದೆ. ಈ ಮಹತ್ವದ ಸಂದರ್ಭದಲ್ಲಿ ನಾನು ಗುಜರಾತ್ ಸರ್ಕಾರ, ಸೋಮನಾಥ ದೇವಾಲಯ ಟ್ರಸ್ಟ್ ಮತ್ತು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
  • ಇಂದು ಬೆಳಗ್ಗೆ 11 ಗಂಟೆಗೆ ಗುಜರಾತ್‌ನ ಸೋಮನಾಥ ದೇಗುಲದ ಬಳಿ ನೂತನ ಸರ್ಕ್ಯೂಟ್ ಹೌಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
  • ಶ್ರೇಷ್ಠ ವಚನಕಾರ, ಸರ್ವಸಮಾನತೆಯ ಹರಿಕಾರ, ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯಂದು ಭಕ್ತಿಯ ನಮನಗಳು. ಸಮಾಜ ಸುಧಾರಣೆಗಾಗಿ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಸೇವೆ ಅಪಾರ ಹಾಗೂ ಸ್ಮರಣೀಯ._ ಸಿ  ಎಂ ಬಸವರಾಜ ಬೊಮ್ಮಾಯಿ.
  • ಈ ಸಾಲಿನ ಅಕ್ಟೋಬರ್ ನಲ್ಲಿ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ -I C C ಇಂದು ಬಿಡುಗಡೆ ಮಾಡಿದೆ.
  • ಪ್ರಪಂಚದಾದ್ಯಂತ ಕರೋನಾ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ; ಸೋಂಕಿತರ ಸಂಖ್ಯೆ 33.89 ಕೋಟಿಗೂ ಹೆಚ್ಚು, ಮೃತರ ಸಂಖ್ಯೆ 55.82 ಲಕ್ಷ ದಾಟಿದೆ.
  • ಇರಾನ್‌ನ ಚಬಹಾರ್ ಬಂದರಿನಲ್ಲಿ ಇರಾನ್, ರಷ್ಯಾ ಮತ್ತು ಚೀನಾ ಜಂಟಿಯಾಗಿ ನೌಕಾ ಸಮರಾಭ್ಯಾಸವನ್ನು ನಡೆಸಲಿವೆ.
  • ಐಸಿಸಿ 2022ರ ಪುರುಷರ ಟಿ-20 ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 16ರಿಂದ ನವೆಂಬರ್ 13 ತನಕ ಪಂದ್ಯಾವಳಿ ನಡೆಯಲಿವೆ.
  • ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆಯನ್ನು ಗ್ರಾನೈಟ್‌ನಿಂದ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. “ಇದು ಅವರಿಗೆ ಭಾರತದ ಋಣಿಯ ಸಂಕೇತವಾಗಿದೆ” ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news