Thursday, February 20, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಈ ಹೊತ್ತಿನ ಪ್ರಮುಖ ಸುದ್ದಿಗಳು !

ಈ ಹೊತ್ತಿನ ಪ್ರಮುಖ ಸುದ್ದಿಗಳು !

  • ಈದ್‌ ಮಿಲಾದ್:‌ ಸಿ ಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ,ವಿಪಕ್ಷ ನಾಯಕರಾದ ಸಿದ್ಧರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರಿಂದ ನಾಡಿನ ಮುಸ್ಲಿಂ ಬಾಂಧವರಿಗೆ ಶುಭಾಶಯ !.
  • ಭಾರತೀಯ ಮಾಹಿತಿ ಸೇವೆಯ(ಐಐಎಸ್) 2020 ಬ್ಯಾಚ್‌ನ ತರಬೇತಿ ಅಧಿಕಾರಿಗಳು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಇಂದು ಹೈದರಾಬಾದ್‌ನ ಅವರ ನಿವಾಸದಲ್ಲಿ ಭೇಟಿ ಮಾಡಿದರು. “ದೊಡ್ಡ ಕನಸು, ಕಷ್ಟಪಟ್ಟು ಕೆಲಸ ಮಾಡಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಿ – ಇದು ಜೀವನದಲ್ಲಿ ಯಶಸ್ವಿಯಾಗಲು ನನ್ನ ಮಂತ್ರ ಎಂದು ಅಧಿಕಾರಿಗಳಿಗೆ ಹೇಳಿದರು.
  • ಪಶ್ಚಿಮ ರೈಲ್ವೆ ವಿಭಾಗವು ತನ್ನ ಮೊದಲ ಕಿಸಾನ್ ಸ್ಪೆಷಲ್ ಈರುಳ್ಳಿ ರೈಲನ್ನು ಬಿಡುಗಡೆ ಮಾಡಿತು. ಈ ರೈಲು ಗುಜರಾತ್ ನ ಭರೂಚ್‌ನಿಂದ ಪಶ್ಚಿಮ ಬಂಗಾಳದ ಮಾಲ್ಡಾ ಟೌನ್ ವರೆಗೆ 228.11 ಟನ್‌ಗಳ ಹೊತ್ತೊಯ್ಯಿತು.
  • ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರದ ವತಿಯಿಂದ ಅಕ್ಟೋಬರ್ 24ರಿಂದ ಮಾತಾಡ್ ಮಾತಾಡ್ ಕನ್ನಡ ಎಂಬ ವಿನೂತನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಭಾಷಾ ಶುದ್ಧತೆ ಕನ್ನಡದ ಶ್ರೇಷ್ಠತೆಯ ಪ್ರತೀಕ ಅದಕ್ಕಾಗಿ ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ಭಾಗವಹಿಸಬಹುದು._ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  • ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮಕ್ಕೆ ಸಚಿವ ಆರ್ ಅಶೋಕ್ ಭೇಟಿ –  ಗ್ರಾಮಸ್ಥರ ಕುಂದು ಕೊರತೆ ಆಲಿಕೆ.
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆಯಲ್ಲಿ 20 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಗೃಹಸಚಿವ ಅಮಿತ್ ಶಾ ಅವರು ‘ಸೇವಾ ಹೀ ಸಂಘಟನ್’ ಕಾರ್ಯಕ್ರಮದಡಿಯಲ್ಲಿ ಮೋದಿ ವೈದ್ಯಕೀಯ ವ್ಯಾನ್‌ಗೆ ಚಾಲನೆ ನೀಡಿದರು. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಈ ವ್ಯಾನ್‌ಗಳು ಕಾರ್ಯನಿರ್ವಹಿಸುತ್ತವೆ.
  • ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್ ಫೈನಲ್ಸ್ ಗೆದ್ದ ಭಾರತದ ಆರ್.ಪ್ರಗ್ನಾನಂದ. ಅಮೆರಿಕದ ಕ್ರಿಸ್ಟೋಫರ್ ಯೂ ಅವರನ್ನು 3-0 ಅಂತರದಿಂದ ಸೋಲಿಸಿ, ಚಾಂಪಿಯನ್ ಆಗಿದ್ದಾರೆ.
  • ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಲನಚಿತ್ರಗಳ ಪೈರಸಿ ಹೆಚ್ಚುತ್ತಿದ್ದು, ಚಲನಚಿತ್ರರಂಗ ಎದುರಿಸುತ್ತಿರುವ ಆನ್ಲೈನ್ ಪೈರಸಿ ಮತ್ತು ಇತರ ಸಮಸ್ಯೆಗಳ ಕುರಿತು ಇಂದು ಚಿತ್ರೋದ್ಯಮದ ಗಣ್ಯರೊಂದಿಗೆ ಚರ್ಚೆ ನಡೆಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
  • ಟ್ವೀಟ್‌ ಕಾರ್ನರ್:‌ “ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ ಮೆಂಟ್ ( ಜಿಐಐ ) ನಿರ್ಧಾರವು ಭಾರತ ಮತ್ತು ಯುಎಇ ನಡುವಿನ ಹೂಡಿಕೆ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಬೆಂಗಳೂರಿನಲ್ಲಿ ಜಿಐಐ ಕಚೇರಿ ತೆರೆಯುತ್ತಿರುವುದು ಹೆಚ್ಚಿನ ಹೂಡಿಕೆ, ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಗೆ ದಾರಿಮಾಡಿಕೊಡುತ್ತದೆ. ನಾವು ನಿರ್ಧಾರವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ!_ ಮುರುಗೇಶ್‌ ನಿರಾಣಿ, ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news