“ಕರ್ನಾಟಕವು ವಿಶ್ವದಾದ್ಯಂತ ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ತಾಣವಾಗಿದೆ. ವಿಶ್ವ ಪ್ರವಾಸೋದ್ಯಮ ದಿನದಂದು, ದೇಶ – ವಿದೇಶಗಳಿಂದ ಪ್ರವಾಸಿಗರು ನಮ್ಮ ರಾಜ್ಯಕ್ಕೆ ಭೇಟಿ ನೀಡಿದಾಗ ಅದರ ಸೌಂದರ್ಯ, ಭವ್ಯತೆ ಮತ್ತು ಆತಿಥ್ಯವನ್ನು ಆನಂದಿಸಲು ನಾವು ಸ್ವಾಗತಿಸುತ್ತೇವೆ. ಒಂದು ರಾಜ್ಯ, ಹಲವು ಪ್ರಪಂಚಗಳು!”_ ಮುರುಗೇಶ್ ಆರ್ ನಿರಾಣಿ, ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವರು.
ವಿಶ್ವ ಪ್ರವಾಸೋದ್ಯಮ ದಿನದ ಸುಸಂದರ್ಭದಲ್ಲಿ ಕರ್ನಾಟಕ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ರವರು ಅಂಚೆ ಲಕೋಟೆಯನ್ನು ಹಾಗೂ ಪ್ರವಾಸೋದ್ಯಮ ನೀತಿ 2020-25ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು.
ಸ್ಯಾಂಡಲ್ ವುಡ್: ಎ.ಹರ್ಷ ಅವರ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ‘ಭಜರಂಗಿ-2’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಚಿತ್ರ ಅಕ್ಟೋಬರ್ 29 ರಂದು ಬಿಡುಗಡೆ ಆಗಲಿದೆ.ಇದೀಗ ಚಿತ್ರ ಮಂದಿರದಲ್ಲಿ 100 % ಸೀಟುಗಳ ಭರ್ತಿಗೆ ಅವಕಾಶ ನೀಡಿದ ಬಳಿಕ ಚಿತ್ರ ತಂಡದಿಂದ ಈ ದೊಡ್ಡ ಅಪ್ಡೇಟ್ ಹೊರ ಬಿದ್ದಿದೆ.
ತಂತ್ರಜ್ಞಾನ: ಮೈಕ್ರೋಸಾಫ್ಟ್, ಎನ್.ಎಸ್.ಡಿ.ಸಿ ಹಾಗೂ ಕೆ.ಎಸ್.ಡಿ.ಸಿ ಸಹಭಾಗಿತ್ವದಲ್ಲಿ ‘ಮೈಕ್ರೋಸಾಫ್ಟ್ ವಿವಿಧ ಕೌಶಲ್ಯ ಪ್ರವರ್ತನ’ ದ ಮೂಲಕ ತಾಂತ್ರಿಕ ಕೌಶಲ್ಯ ಹಾಗೂ ಜ್ಞಾನದ ಕೊರತೆ ಇರುವ ಮಹಿಳೆಯರಿಗೆ 4 ವಿಭಾಗದ ಕೋರ್ಸ್ ಗಳನ್ನು ಉಚಿತವಾಗಿ ಆನ್ಲೈನ್ ಮೂಲಕ ತರಬೇತಿ ನೀಡಲಿದೆ.
ಕೋವಿಡ್-19 : ದೇಶಾದ್ಯಂತ ಇದುವರೆಗೆ 86.01 ಕೋಟಿಗೂ ಅಧಿಕ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡವರ ಸಂಖ್ಯೆ-29,621. ಕಳೆದ 24 ಗಂಟೆಯಲ್ಲಿ ನೀಡಲಾದ ಒಟ್ಟು ಕೋವಿಡ್-19 ಲಸಿಕಾ ಡೋಸ್ ಗಳ ಸಂಖ್ಯೆ-38,18,362.
ಕ್ರೀಡೆ: ದುಬೈನಲ್ಲಿ ಇಂದು ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಸನ್ ರೈಸರ‍್ಸ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ದೇಶ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ. ಬಂದ್‌ಗೆ ಕಾಂಗ್ರೆಸ್, ಬಿಎಸ್‌ಪಿ, ಆರ್‌ಜೆಡಿ, ಡಿಎಂಕೆ, ವೈಎಸ್ಸಾರ್ ಬೆಂಬಲ. ಸೋಮವಾರದ ಬಂದ್‌ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಡಿಸಿದ್ದು, ತನ್ನಲ್ಲೇ ಕಾರ್ಯಕರ್ತರಿಗೆ, ರಾಜ್ಯ ಹಾಗೂ ಸಮಿತಿಗಳ ಪದಾಧಿಕಾರಿಗಳಿಗೆ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. ಅಲ್ಲದೆ, ಆಮ್ ಆದ್ಮಿ ಪಕ್ಷ, ವೈಎಸ್‌ಆರ್‌ಸಿ, ಡಿಎಂಕೆ, ತೆಲುಗು ದೇಶಂ ಪಕ್ಷ, ಬಿಎಸ್‌ಪಿ, ಆರ್‌ಜೆಡಿ ಪಕ್ಷಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ಬಂದ್‌ಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿವೆ.
ವಿದೇಶ: ಜರ್ಮನಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಷಿಯಲ್ ಡೆಮೊಕ್ರಟಿಕ್ ಪಕ್ಷ ಅತಿ ಹೆಚ್ಚು ಮತಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಸಾಗಿದೆ. ಇದರಿಂದ ಏಂಜಲ್ ಮಾರ್ಕಲ್ ಅವರ 16 ವರ್ಷಗಳ ಸುದೀರ್ಘ ಆಡಳಿತ ಕೊನೆಗೊಳ್ಳುವ ಸಾಧ್ಯತೆಗಳಿವೆ.
