- ರಾಯಚೂರಿನ ಕರ್ನಾಟಕ ನೀರಾವರಿ ಸಂಘದ ಪದಾಧಿಕಾರಿಗಳ ನಿಯೋಗವು ಇಂದು ಮಾಜಿ ಸಿ ಎಂ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ, ಮಸ್ಕಿ ಸೇರಿದಂತೆ ವಿವಿಧ ಬರಪೀಡಿತ ತಾಲೂಕುಗಳ ರೈತರಿಗೆ ಅನುಕೂಲ ಆಗುವ NRBC 5(A) ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ ಮಸ್ಕಿ ಶಾಸಕರಾದ ಬಸವನಗೌಡ ತುರುವಿಹಾಳ ಹಾಜರಿದ್ದರು.
- ಲೋಕೋಪಯೋಗಿ ಇಲಾಖೆಯಲ್ಲಿ ಕೈಗೊಳ್ಳುವ ರಸ್ತೆ, ಸೇತುವೆ ಕಾಮಗಾರಿಗಳ ನಿರ್ಮಾಣ ನಿರ್ವಹಣೆ ಸೇರಿದಂತೆ ಅವುಗಳ ಗುಣಮಟ್ಟ ಕಾಪಾಡಿಕೊಳ್ಳಲು ತಜ್ಞರನ್ನು ಒಳಗೊಂಡ ಸಮಾಲೋಚಕರ ತಂಡ ರಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸಿ ಸಿ ಪಾಟೀಲ್ ತಿಳಿಸಿದ್ದಾರೆ.
- ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು ಎಂದು ವಸತಿ ಸಚಿವರಾದ ವಿ ಸೋಮಣ್ಣ ತಿಳಿಸಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ಕೊಂಕಣ ರೈಲ್ವೆ ಮಾರ್ಗದ ಸುರಂಗ ಯೋಜನೆಯನ್ನು ಕೈಗೊಳ್ಳಲಾಗುವುದು ಇದಕ್ಕಾಗಿ ಈ ಮಾರ್ಗದ ಸ್ಥಳ ಸಮೀಕ್ಷೆ ನಡೆಸಲಾಗಿದೆ ಎಂದರು.
- ರಾಜ್ಯಾದ್ಯಂತ ಗ್ರಾಮಕ್ಕೊಂದರಂತೆ ಸ್ಮಶಾನ ಇರಬೇಕು, 3 ವರ್ಷದಲ್ಲಿ ಸರ್ಕಾರ 26 ಕೋಟಿ ರೂ. ಬಿಡುಗಡೆ ಮಾಡಿದೆ. 372 ತಾಲ್ಲೂಕುಗಳಲ್ಲಿ ಸ್ಮಶಾನ ಇಲ್ಲ ಎಂಬ ವರದಿ ಇದೆ. ಜಿಲ್ಲಾಧಿಕಾರಿಗಳಿಂದ ವಿಶೇಷ ಪ್ರಸ್ತಾವನೆ ಪಡೆದು ಹೆಚ್ಚುವರಿ ಹಣ ನೀಡಿ ಸ್ಮಶಾನಕ್ಕಾಗಿ ಭೂಮಿ ಖರೀದಿಸಲಾಗುವುದು ಎಂದು ಕಂದಾಯ ಸಚಿವರಾದ ಆರ್ ಅಶೋಕ್ ಹೇಳಿದ್ದಾರೆ.
- ಆಯುಷ್ ಸಚಿವಾಲಯ ಜಾಗತಿಕವಾಗಿ ಆಯುರ್ವೇದ ಮತ್ತು ಇತರ ಭಾರತೀಯ ಸಾಂಪ್ರದಾಯಿಕ ಔಷಧ ಉತ್ಪನ್ನಗಳ ಗುಣಮಟ್ಟ ಬಲಪಡಿಸಲು ಮತ್ತು ಅವುಗಳ ರಫ್ತು ಸಾಮರ್ಥ್ಯ ಹೆಚ್ಚಿಸಲು ಅನುವು ಮಾಡಿಕೊಟ್ಟಿದೆ. ಭಾರತೀಯ ಮೆಡಿಸಿನ್ ಮತ್ತು ಹೋಮಿಯೋಪತಿ, ಫಾರ್ಮಾಕೊಪೊಯಿಯಾ ಕಮಿಷನ್ ಮತ್ತು ಅಮರಿಕನ್ ಹರ್ಬಲ್ ಫಾರ್ಮಾಕೊಪೊಯಿಯಾ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆಯುರ್ವೇದ ಹಾಗೂ ಇತರ ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಿ ಅವುಗಳನ್ನು ವಿಶೇಷವಾಗಿ ಅಮೆರಿಕ ಮಾರುಕಟ್ಟೆಗೆ ರಫ್ತು ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಾಗುವಂತೆ ಆಯುಷ್ ಸಚಿವಾಲಯ ಮಾರ್ಗಸೂಚಿ ರೂಪಿಸಿದೆ.
- ಪಶು ಸಹಾಯ ಕೇಂದ್ರಗಳನ್ನು ಸ್ಥಾಪಿಸಿ ಪಶುಗಳ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಗೊಂದರಂತೆ ಗೋಶಾಲೆ ನಿರ್ಮಿಸಲಾಗಿದೆ. ಜಾನುವಾರುಗಳ ಸೂಕ್ತ ಚಿಕಿತ್ಸೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
- ಬೆಂಗಳೂರು ವ್ಯಾಪ್ತಿಯ 30 ಕಡೆಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
- “ಅನ್ಯ ಇಲಾಖೆಗೆ ಎರವಲು ಪಡೆದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ತಾಲೂಕು ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆಯಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಹುದ್ದೆಗಳನ್ನು ಭರ್ತಿ ಮಾಡಲಾಗುವುದು”- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ ಎಸ್ ಈಶ್ವರಪ್ಪ.
- ದೂರದರ್ಶನದೊಂದಿಗೆ ಆರಂಭವಾಯಿತು ಟೆಲಿವಿಷನ್ ಇತಿಹಾಸ; ಸೆಪ್ಟೆಂಬರ್ 15, 1959ರಂದು ಪ್ರಾರಂಭಿಸಲಾಯಿತು. 5 ನಿಮಿಷಗಳ ಸುದ್ಧಿ ಬುಲೆಟಿನ್ ಆಗಸ್ಟ್ 15, 1965 ರಂದು ಪ್ರಾರಂಭವಾಯಿತು.
- ನಿಪ್ಪಾಣಿ: ಆಶ್ರಯ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಬಾರ್ಡ್ ಆರ್.ಐ.ಡಿ.ಎಫ್-25 ಯೋಜನೆಯಡಿ ಮಂಜೂರಾದ 11 ಲಕ್ಷ ರೂ. ಮೊತ್ತದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.
