- ಷೇರು ಮಾರುಕಟ್ಟೆಯ ದಿನದ ವಹಿವಾಟು. ಸೆನ್ಸೆಕ್ಸ್ 15 ಅಂಕಗಳ ಕುಸಿತದೊಂದಿಗೆ 55,944ರಲ್ಲಿ ಕೊನೆಗೊಂಡಿದೆ. ನಿಫ್ಟಿ 10 ಅಂಕಗಳ ಏರಿಕೆಯೊಂದಿಗೆ 16,634ರಲ್ಲಿ ಕೊನೆಗೊಂಡಿದೆ.
- ಬೆಂಗಳೂರು: KSRP ಕ್ರೀಡಾಂಗಣದಲ್ಲಿ ಪೊಲೀಸ್ ಪಬ್ಲಿಕ್ ಶಾಲೆಯ ಶಿಶು ವಿಹಾರ ಹಾಗೂ ಆಡಳಿತ ಕಚೇರಿಯ ನೂತನ ಕಟ್ಟಡವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಉದ್ಘಾಟಿಸಿದರು.
- ಬೆಳಗಾವಿ: ಕಂಟೋನ್ಮೆಂಟ್ ಬೋರ್ಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬರ್ಚೆಸ್ವಾ ಅವರು ಆಸ್ಸಾಂ ರಾಜ್ಯಕ್ಕೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಅವರನ್ನು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಸನ್ಮಾನಿಸಿ, ಬಿಳ್ಕೋಟ್ಟರು.
- ದೆಹಲಿ: ಭಾರತ-ಪಾಕಿಸ್ತಾನ ಯುದ್ಧಕ್ಕೆ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ಯುದ್ಧದ ಕುರಿತ ಕೃತಿ ಬಿಡುಗಡೆ ಮಾಡಲಾಯಿತು.
- ಗೃಹ ಸಚಿವಾಲಯ: ಆಫ್ಘಾನಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯ ಆಫ್ಘನ್ ನಾಗರಿಕರಿಗೆ ಇ-ವೀಸಾವನ್ನು ಕಡ್ಡಾಯಗೊಳಿಸಿದೆ. ಭಾರತಕ್ಕೆ ಆಗಮಿಸುವ ಆಫ್ಘನ್ ನಾಗರಿಕರಿಗೆ ಇ-ವೀಸಾ ಕಡ್ಡಾಯ, ಇ-ತುರ್ತು ಎಕ್ಸ್ ಬಹುಮುಖಿ ವೀಸಾ ಎಂದು ಪರಿಚಯಿಸಲಾಗಿದೆ , ಇದನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತದೆ.
- 2021-22 ನೇ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಕ್ಷಿಂಟಾಲ್ ಗೆ 290 ರೂ. ಎಫ್ ಆರ್ ಪಿ ಮೊತ್ತ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
- ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಕ್ರೀಡಾಪಟುಗಳೊಂದಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಸಂವಾದ ನಡೆಸಿದರು. ಭಾರತ ತನ್ನ ಸಾಮರ್ಥ್ಯವನ್ನು ಸಮರ್ಥವಾಗಿ ತೋರಿದೆ. ಸರ್ಕಾರ ಆಟಗಾರರಿಗೆ ಅತ್ಯುತ್ತಮ ಮೂಲಸೌಕರ್ಯ ಒದಗಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು.
- ಶಿವಮೊಗ್ಗ: ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಕೌಶಲ್ಯ ಮಿಷನ್ ಸಂಯುಕ್ತಾಶ್ರಯದಲ್ಲಿ ಮಿನಿ ಉದ್ಯೋಗ ಮೇಳವನ್ನು ನಾಳೆ ಗುರುವಾರ (ಆಗಷ್ಟ 26, 2021) ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು, ಗೋಪಿ ಸರ್ಕಲ್ ಹತ್ತಿರ, ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ.
- ಪಶ್ಚಿಮ ಬಂಗಾಳ: ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ (ಡಿಎಚ್‌ಆರ್) ಒಂದೂವರೆ ವರ್ಷಗಳ ನಂತರ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಡಾರ್ಜಿಲಿಂಗ್‌ಗೆ ತನ್ನ ಆಟಿಕೆ ರೈಲಿನ (ಟಾಯ್ ಟ್ರೇನ್) ನಿಯಮಿತ ಸೇವೆಗಳನ್ನು ಇಂದಿನಿಂದ ಆರಂಭಿಸಿದೆ.
- ಹಣಕಾಸು
ಸಚಿವಾಲಯ: ಆಂಕರೇಜ್ ಮೂಲಸೌಕರ್ಯ ಹೂಡಿಕೆ ಸಂಸ್ಥೆಯು ಸಲ್ಲಿಸಿದ ಭಾರತದಲ್ಲಿ 15000 ಕೋಟಿ ರೂ.ಹೂಡಿಕೆಯ ಎಫ್ ಡಿ ಐ ಪ್ರಸ್ತಾವನೆಗೆ ಸಂಪುಟದ ಅನುಮೋದನೆ.
ಹೂಡಿಕೆಯು ಮೂಲಸೌಕರ್ಯ, ನಿರ್ಮಾಣ ಕ್ಷೇತ್ರಕ್ಕೆ ಮತ್ತು ವಿಮಾನ ನಿಲ್ದಾಣ ವಲಯಕ್ಕೆ ಪ್ರಮುಖವಾಗಿ ಉತ್ತೇಜನ ನೀಡಲಿದೆ.
ಸರ್ಕಾರಿ ಸ್ವಾಮ್ಯದ ಮೂಲಸೌಕರ್ಯ ಸ್ವತ್ತುಗಳನ್ನು ನಿರ್ವಹಣೆಗಾಗಿ ಗುತ್ತಿಗೆ ನೀಡುವ ಇತ್ತೀಚೆಗೆ ಘೋಷಿಸಿದ ರಾಷ್ಟ್ರೀಯ ನಗದೀಕರಣ ಯೋಜನೆಗೆ (ಎನ್ ಎಮ್ ಪಿ) ಗಮನಾರ್ಹ ಉತ್ತೇಜನ. - “ರಾಜ್ಯ ಸರ್ಕಾರ ಸೆಪ್ಟೆಂಬರ್ 15ರ ಒಳಗಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಶೇ 50ಕ್ಕಿಂತ ಹೆಚ್ಚು ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಶೇ 70ಕ್ಕೂ ಹೆಚ್ಚು ಪಠ್ಯ ಪುಸ್ತಕಗಳು ಮುದ್ರಣಗೊಂಡಿದ್ದು, ಸರಬರಾಜಿಗೆ ಸಿದ್ಧವಾಗಿದೆ. ಆನ್ಲೈನ್ನಲ್ಲಿ ಪಠ್ಯ ಪುಸ್ತಕಗಳು ಲಭ್ಯವಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಡೌನ್ಲೋಡ್ ಮಾಡಿಕೊಳ್ಳಬಹುದು. ಮಕ್ಕಳ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಾ ಎಲ್ಲಾ ಮಕ್ಕಳು ಶಾಲೆಗೆ ಬಂದು ಭೌತಿಕ ಶಿಕ್ಷಣ ಪಡೆಯಬೇಕು.”_ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ ಸಿ ನಾಗೇಶ್ ( ಟ್ವೀಟ್ ಖಾತೆ)
