- ಟೋಕಿಯೊ 2020 ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಜಾವೆಲಿನ್ ಎಸೆತಗಾರ ಟೆಕ್ ಚಂದ್ ಆಯ್ಕೆ.
- ಅಫ್ಗಾನ್ ಜನರ ಪರವಾಗಿ ನಿಲ್ಲಲು ಮತ್ತು ನಿರಾಶ್ರಿತರಿಗೆ ಮಾನವೀಯ ನೆರವು ನೀಡುವ ಸಲುವಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ಮಧ್ಯಾಹ್ನ G-7 ರಾಷ್ಟ್ರಗಳ ನಾಯಕರ ಸಭೆಯನ್ನು ಇಂದು ಕರೆದಿದ್ದಾರೆ.
- ಜಪಾನ್ ರಾಜಧಾನಿ ಟೋಕಿಯೊದಲ್ಲಿ ಇಂದಿನಿಂದ ಸೆಪ್ಟೆಂಬರ್ 5ರವರೆಗೆ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 54 ಅಥ್ಲೀಟ್‌ಗಳು ಭಾರತವನ್ನು ಪ್ರತಿನಿಧಿಸಲಿದ್ದು, 9 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
- “ಕೇಂದ್ರದ ಮಾಜಿ ಸಚಿವ, ಪದ್ಮವಿಭೂಷಣ ಶ್ರೀ ಅರುಣ್ ಜೇಟ್ಲಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಜಿ.ಎಸ್.ಟಿ ಜಾರಿ ಸೇರಿದಂತೆ ಹಲವಾರು ಸುಧಾರಣಾ ಕ್ರಮಗಳಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದ ಅವರ ಕೊಡುಗೆಗಳು ಅವಿಸ್ಮರಣೀಯ.”_ ಸಿ ಎಂ ಬಸವರಾಜ ಬೊಮ್ಮಾಯಿ.
- “ದಕ್ಷಿಣ ರೈಲ್ವೆಯಲ್ಲಿ ಚೆನ್ನೈ ವಿಭಾಗವು ವೆಪಗುಂಟಾ ಮತ್ತು ಪುತ್ತೂರು ನಿಲ್ದಾಣಗಳ ನಡುವಿನ ಸುರಂಗಮಾರ್ಗದ ಕೆಲಸವನ್ನು ಐದು ಗಂಟೆಗಳಲ್ಲಿ ನಿರ್ವಹಿಸಿತು, ರಾತ್ರಿಯಿಡೀ ಕೆಲಸ ಮಾಡುತ್ತಿತ್ತು. ಇದು ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರೈಲುಗಳ ವೇಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ.”_ ರೈಲ್ವೆ ಸಚಿವಾಲಯ
- ಬಿ ಎಂ ಟಿ ಸಿ: 9 ತರಗತಿಯಿಂದ 12(ಪಿಯುಸಿ) ತರಗತಿಯ ವಿದ್ಯಾರ್ಥಿಗಳು ಶಾಲಾ/ಕಾಲೇಜಿನ ದಾಖಲಾಗಿರುವ ಶುಲ್ಕದ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ದಿನಾಂಕ 23.8.21 ರಿಂದ ಮುಂದಿನ ಆದೇಶದವರೆಗೆ ಸಾಮಾನ್ಯ ಬಸ್ಸುಗಳಲ್ಲಿ ಮನೆಯಿಂದ ಶಾಲಾ/ಕಾಲೇಜಿನವರೆಗೆ ಪ್ರಾಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
- ಬೆಂಗಳೂರು: ʻಗಿವ್ ಇಂಡಿಯಾ” ಹಾಗೂ ʻಎಸ್ ಡಿ ಜಿ ಸಿ ಸಿ “ ಸಹಯೋಗದೊಂದಿಗೆ, ಕರ್ನಾಟಕ ಸರ್ಕಾರದ ಉಪಕ್ರಮದ ‘ವ್ಯಾಕ್ಸಿನೇಟ್ ಇಂಡಿಯಾ’ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಚಾಲನೆ ನೀಡಿದರು.
- “ದೇಶದಲ್ಲಿ ಕೋವಿಡ್ ಚೇತರಿಕೆಯ ಪ್ರಮಾಣ ಶೇ. 97.6 ಕ್ಕೆ ತಲುಪಿದೆ ಮತ್ತು ಸೋಂಕಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ದೊಡ್ಡ ನಿರಾಳವಾಗಿದೆ. ಆದರೂ, ಸಂಪೂರ್ಣ ಆತ್ಮತೃಪ್ತಿಗೆ ಅವಕಾಶವಿಲ್ಲ. ನಾವು ನಮ್ಮ ರಕ್ಷಣೆಯ ವಿಷಯದಲ್ಲಿ ಉದಾಸೀನ ಮಾಡುವಂತಿಲ್ಲ.”_ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು.
- ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ – ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ: ಆಗಸ್ಟ್ 23 ರಿಂದ ಶಾಲೆಗಳು ಆರಂಭವಾಗಿದ್ದು ವಿದ್ಯಾರ್ಥಿಗಳು NWKRTC ಬಸ್ಸಿನಲ್ಲಿ ಸಂಚರಿಸುವಾಗ ಕಳೆದ ವರ್ಷದ ಸ್ಮಾರ್ಟ್ ಕಾರ್ಡ್/ಪಾಸುಗಳನ್ನು ತೋರಿಸಿ ಮನೆಯಿಂದ ಶಿಕ್ಷಣ ಸಂಸ್ಥೆವರೆಗೆ ಗರಿಷ್ಠ 60 km ಪ್ರಯಾಣ ಮಾಡಬಹುದಾಗಿದೆ.
- ರಾಜ್ಯದಲ್ಲಿ ಶಾಲೆಗಳು ಪುನರಾರಂಭವಾದ ಹಿನ್ನೆಲೆ, ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರು ಬೆಂಗಳೂರಿನ ಅನೇಕ ಶಾಲೆಗಳಿಗೆ ಭೇಟಿ ನೀಡಿ ಭೌತಿಕ ತರಗತಿಗಳ ಪ್ರಾರಂಭಕ್ಕೆ ಕೈಗೊಂಡ ವ್ಯವಸ್ಥೆ ಕುರಿತು ಪರಿಶೀಲಿನೆ ನಡೆಸಿದರು.
- ಸೆಪ್ಟೆಂಬರ್ ಮೊದಲ ವಾರದಲ್ಲಿ ದೆಹಲಿ ಪ್ರವಾಸವನ್ನು ಕೈಗೊಂಡು ಕೇಂದ್ರದ ಹಲವು ಸಚಿವರಗಳನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
