ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯದ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕ ಗೋಷ್ಠಿಯಲ್ಲಿಂದು, ಮೂರು ಪೂರ್ವೋತ್ತರ ರಾಜ್ಯಗಳ ಚುನಾವಣಾ ದಿನಾಂಕ ಘೋಷಿಸಿದರು.
ಬರುವ ಫೆಬ್ರವರಿ 16ರಂದು ಒಂದೇ ಹಂತದಲ್ಲಿ ತ್ರಿಪುರಾ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಹಾಗೂ ಫೆಬ್ರವರಿ 27ರಂದು ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದರ ಜತೆಯಲ್ಲಿ ಕೆಲವು ರಾಜ್ಯಗಳ ಉಳಿದಿರುವ ಉಪ ಚುನಾವಣೆಯೂ ಸಹ ಫೆಬ್ರವರಿ 27ರಂದು ನಡೆಯಲಿದೆ. ತಮಿಳುನಾಡು, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರದಲ್ಲಿ ವಿಧಾನಸಭೆ ಹಾಗೂ ಲಕ್ಷದ್ವೀಪದ ಒಂದು ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯಲಿದೆ.
ಈ ಸಂಬಂಧ ಬರುವ ಜನವರಿ 31ರಂದು ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳಲಿದೆ. ಈ ಮೂರು ರಾಜ್ಯಗಳಲ್ಲಿ ಒಟ್ಟು 6 ಕೋಟಿ 28 ಲಕ್ಷ ಮತದಾರರಿದ್ದಾರೆ ಹಾಗೂ ಒಟ್ಟು 376 ಮತ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಎಲ್ಲಾ ಕ್ಷೇತ್ರಗಳ ಮತ ಎಣಿಕೆಯು ಮಾರ್ಚ್ 2ರಂದು ನಡೆಯಲಿದೆ. ಈ ಮತದಾನ ಪ್ರಕ್ರಿಯೆಯಲ್ಲಿ 2 ಲಕ್ಷದ 28 ಸಾವಿರ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
_CLICK to Follow-Support us on ShareChat