- ಇಂದಿನಿಂದ ಪ್ರಾರಂಭವಾದ ವಿಧಾನ ಮಂಡಲದ ಅಧಿವೇಶನ – ಇತ್ತೀಚಿಗೆ ಅಗಲಿದ ಗಣ್ಯರಿಗೆ ಸಂತಾಪ: ವಿಧಾನಮಂಡಲದ 10 ದಿನಗಳ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ಪ್ರಸ್ತಾಪ ಮಂಡಿಸಿದರು. ಈ ವೇಳೆ ಅವರು ಕೇಂದ್ರದ ಮಾಜಿ ಸಚಿವ ಬಾಬಗೌಡ ಪಾಟೀಲ್, ಲೋಕಸಭೆಯ ಮಾಜಿ ಸದಸ್ಯರಾದ ಜಿ.ಮಾದೇಗೌಡ, ಎಸ್.ಬಿ.ಸಿದ್ನಾಳ್, ಎಂ.ರಾಜ್‍ಗೋಪಾಲ್, ರಾಜ್ಯಸಭೆಯ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ, ಮಾಜಿ ಸಚಿವರಾಗಿದ್ದ ಪ್ರೊ.ಮುಮ್ತಾಜ್ ಆಲಿಖಾನ್, ಎ.ಕೆ.ಅಬ್ದುಲ್ ಸಮದ್, ವಿಧಾನಪರಿಷತ್ ಸದಸ್ಯರಾಗಿದ್ದ ಡಾ.ಸಿದ್ದಲಿಂಗಯ್ಯ, ಮಾಜಿ ಶಾಸಕರಾದ ರೇವಣಸಿದ್ದಪ್ಪ ಕಲ್ಲೂರ, ಸದಾಶಿವರಾವ ಬಾಪೂ ಸಾಹೇಬ ಭೋಸಲೆ, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ಕನ್ನಡ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಚಿತ್ರನಟಿ ಜಯಂತಿ, ಸಾಹಿತಿ ಡಾ.ವಂಸತ ಕುಷ್ಠಗಿ ಸೇರಿದಂತೆ ಹಲವರಿಗೆ ಸಂತಾಪ ಸೂಚಿಸಿದರು. ಮೃತರ ಸೇವೆಯನ್ನು ಸ್ಮರಿಸಿ, ಅಗಲಿದ ಗಣ್ಯರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದರು. ಸಭಾಧ್ಯಕ್ಷರ ಸಂತಾಪ ಸೂಚಕಕ್ಕೆ ಧ್ವನಿಗೂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಳೆದ ಅಧಿವೇಶನದಿಂದ ಈ ಅಧಿವೇಶನದ ನಡುವೆ ಹಲವು ಗಣ್ಯರು ಅಗಲಿದ್ದಾರೆ. ಎಲ್ಲರ ಸೇವೆ ಸ್ಮರಣೀಯ ಎಂದರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಮತ್ತಿತರರ ಪ್ರಮುಖರು ಮಾತನಾಡಿ ಮೃತರ ಸಾಧನೆ ಕುರಿತು ಮೆಲುಕು ಹಾಕಿದರು. ಬಳಿಕ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು. (Courtesy:DD News)
- ರೈತರಿಗೆ ಸೂಕ್ತ ಸಲಹೆಗಾಗಿ ʻಮೇಘದೂತ ʼ ಮೊಬೈಲ್ ಆಪ್: ರೈತರಿಗೆ ಕಾಲಕಾಲಕ್ಕೆ ಸೂಕ್ತ ಸಲಹೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ, ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಜಂಟಿಯಾಗಿ ʻಮೇಘ ದೂತ’ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಕೃಷಿ ಆಧಾರಿತ ಸಲಹೆಗಳು ಮತ್ತು ಸ್ಥಳೀಯ ಹವಮಾನ ಮುನ್ಸೂಚನೆಯನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ತಲುಪಿಸುವ ಕೆಲಸವನ್ನು ಈ ಆ್ಯಪ್ ಮಾಡುತ್ತಿದೆ. ಜಿಲ್ಲಾ ಕೃಷಿ ಹವಾಮಾನ ಘಟಕ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮುಂದಿನ 5 ದಿನಗಳ ಹವಾಮಾನ ಸ್ಥಿತಿಗತಿ ಸೇರಿದಂತೆ ರೈತರು ಬೆಳೆಗಳ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಮೂಲಕ ಮಾಹಿತಿ ರವಾನೆ ಮಾಡಲಿದೆ. 3 ಕೀಲೋ ಮೀಟರ್ ವ್ಯಾಪ್ತಿಯಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ತೇವಾಂಶ, ಗಾಳಿಯ ವೇಗ ಮತ್ತು ದಿಕ್ಕು ಮಣ್ಣಿನ ತೇವಾಂಶ ಮತ್ತು ಉಷ್ಣಾಂಶ ಮಳೆ ಪ್ರಮಾಣ ಕುರಿತು 15 ನಿಮಿಷಕ್ಕೊಮ್ಮೆ ಮಾಹಿತಿ ನೀಡಲಾಗುತ್ತದೆ. ರೈತರು ಮೇಘದೂತ ಆಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಸದುಪಯೋಗ ಪಡೆಯಬಹುದಾಗಿದೆ.
- “ರಾಜ್ಯಸಭಾ ಸಂಸದ ಶ್ರೀ ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ದುಃಖವಾಗಿದೆ. ಈ ದುಃಖದ ಸಮಯದಲ್ಲಿ, ನನ್ನ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇವೆ. ಅವರ ಆತ್ಮಕೆ ಶಾಂತಿ ಸಿಗಲಿ”_ ಪ್ರಧಾನ ಮಂತ್ರಿ ನರೇಂದ್ರ ಮೋದಿ
- ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ – “ಆಸ್ಕರ್ ಕಳೆದುಕೊಂಡಿದ್ದು ನನ್ನ ವೈಯಕ್ತಿಕ ನಷ್ಟ ಎಂದ ರಾಹುಲ್ – ನನ್ನ ರಾಜಕೀಯ ಗುರು ಮತ್ತು ಮಾರ್ಗದರ್ಶಕರಾಗಿದ್ದರು – ಕಾಂಗ್ರೆಸ್ನ ಹಲವರಿಗೆ ಆಸ್ಕರ್ ಮಾರ್ಗದರ್ಶಕರಾಗಿದ್ದರು – ಆಸ್ಕರ್ರನ್ನ ಕಾಂಗ್ರೆಸ್ ತುಂಬಾ ಮಿಸ್ ಮಾಡಿಕೊಳ್ಳಲಿದೆ”
- “ನಮ್ಮ ನಾಡಿನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ನನ್ನ ಆಪ್ತರೂ ಆಗಿದ್ದ ಆಸ್ಕರ್ ಫರ್ನಾಂಡೀಸ್ ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ. ಕೆಲ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಗುಣಮುಖರಾಗಿ ಮನೆಗೆ ಮರಳುತ್ತಾರೆ ಎನ್ನುವ ಹೊತ್ತಿನಲ್ಲಿ ಈ ಆಘಾತದ ಸುದ್ದಿ ಬಂದಿದೆ. ಕಾಂಗ್ರೆಸ್ ಕಟ್ಟಾಳುವಾಗಿದ್ದ ಅವರು ಪಕ್ಷವನ್ನು ಮಾತೃಸ್ವರೂಪದಂತೆ ಕಂಡವರು. ನಿಷ್ಠೆ, ನಂಬಿಕೆಯ ಪ್ರತೀಕವಾಗಿದ್ದರು. ಕಾಂಗ್ರೆಸ್ ಸಂಸ್ಕೃತಿಗೆ ಎಲ್ಲೂ ಚ್ಯುತಿ ಬಾರದಂತೆ ನಡೆದುಕೊಂಡರು. ಅವರಿಗೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ.”_ ಮಾಜಿ ಸಿ ಎಂ ಕುಮಾರಸ್ವಾಮಿ ಟ್ವೀಟ್.
- ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆಯನ್ನು ಕಡಿತಗೊಳಿಸಬೇಕು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
- ರಾಯಚೂರು: ಜಿಲ್ಲೆಯ ಲಿಂಗಸ್ಗೂರು ನಗರದ ERV ಕರ್ತವ್ಯ ನಿರತ ಅಧಿಕಾರಿಗಳು, ಡಾ:ಸುಧಾಮೂರ್ತಿ ಮಹಿಳಾ ಕಾಲೇಜನಲ್ಲಿ ವಿದ್ಯಾರ್ಥಿನಿಯರಿಗೆ ERSS-112 (ತುರ್ತು ಸ್ಪಂದನ ಸೇವಾ ವ್ಯವಸ್ಥೆ) ಬಗ್ಗೆ ಅರಿವು ಮೂಡಿಸಿ, ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112ಗೆ ಕರೆ ಮಾಡಲು ತಿಳಿಸಿದರು.
- ರಾಜ್ಯದ ಇಂದಿನ ಕೋವಿಡ್-19 ವಿವರ: ಹೊಸ ಪ್ರಕರಣ : 673 ಇಂದು ಚೇತರಿಸಿಕೊಂಡವರು: 1074 ಒಟ್ಟು ಸಕ್ರಿಯ ಪ್ರಕರಣ : 16241 ಇಂದಿನ ಸಾವಿನ ಸಂಖ್ಯೆ ಮತ್ತು ಶೇಖಡಾವಾರು ಪ್ರಮಾಣ : 13 (1.93%) ಒಟ್ಟು ಸಾವು : 37517 ಕೋವಿಡ್ ಪರೀಕ್ಷೆ ಮತ್ತು ಶೇಖಡಾವಾರು ಪ್ರಮಾಣ : 119014 (0.56%) ಇದುವರೆಗಿನ ಒಟ್ಟು ಲಸಿಕೆ: 47806422
- ಕೇರಳದ ಇಂದಿನ ಕೋವಿಡ್-19 ವಿವರ: ಹೊಸ ಪ್ರಕರಣ : 15,058 ಇಂದು ಚೇತರಿಸಿಕೊಂಡವರು: 28,439 ಕಳೆದ 24 ಗಂಟೆಗಳಲ್ಲಿನ ಸಾವಿನ ಸಂಖ್ಯೆ:99 ಒಟ್ಟು ಸಕ್ರಿಯ ಪ್ರಕರಣ : 2,08,773.
- ಬಂಗಾಳಕೊಲ್ಲಿಯ ಸಾಗರ್ ದ್ವೀಪದ ಸಮೀಪ ಇಂಜಿನ್ ವೈಫಲ್ಯದಿಂದ ಸಿಲುಕಿದ್ದ ಬೋಟ್‌ನಲ್ಲಿದ್ದ 11 ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ.
- ಒಡಿಶಾದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ, ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
- ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದ್ದು, ನೋಂದಣಿ ಉಚಿತವಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕ್ರೀಡಾ ಸಚಿವಾಲಯ ದೇಶಾದ್ಯಂತ 1 ಲಕ್ಷ ಶಾಲೆಗಳಿಂದ 2 ಲಕ್ಷ ವಿದ್ಯಾರ್ಥಿಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
