ಅಂತರ್ ರಾಜ್ಯ – ಸಂಕ್ಷಿಪ್ತ ಸುದ್ದಿ:
ಆಂಧ್ರಪ್ರದೇಶ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು, ವಿಜಯವಾಡದಲ್ಲಿ 125 ಅಡಿ ಎತ್ತರದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಹಲವಾರು ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳು, ಮುಖಂಡರುಗಳು ಹಾಜರಿದ್ದರು. ಆನ್ ಲೈನ್ ಶಂಕುಸ್ಥಾಪನೆ ನೆರವೇರಿದ ನಂತರ ಚಪ್ಪಾಳೆ ಮೂಲಕ ಕೃತಜ್ಞತೆ ವ್ಯಕ್ತಪಡಿಸಲಾಯಿತು.
