ಹುಬ್ಬಳ್ಳಿ: ಕರ್ನಾಟಕ ಮಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ನ ನೂತನ ಕಟ್ಟಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮುಖ್ಯಮಂತ್ರಿ, ಯಾವುದೇ ವಸ್ತುವಿನ ಗುಣಮಟ್ಟ ಪರೀಕ್ಷೆಯಾಗಿ ಅದರ ಮಾನ್ಯತೆ ಪ್ರಮಾಣೀಕೃತವಾದಾಗ ಮಾತ್ರ ಅದರ ಗುಣಮಟ್ಟದ ಖಾತರಿಯಾಗುತ್ತದೆ. ಈ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದ್ದು ಮೆಕ್ಯಾನಿಕಲ್, ಕೆಮಿಕಲ್ ಟೆಸ್ಟಿಂಗ್ ಅಲ್ಲದೇ ನೀರು, ಮಣ್ಣಿನ ಗುಣಮಟ್ಟ ಪರೀಕ್ಷೆಯ ಅತ್ಯಾಧುನಿಕ ಸೌಲಭ್ಯಗಳೂ ಇರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಉಪಸ್ಥಿತರಿದ್ದರು.
-ಇತ್ತೀಚಿನ ಸಂಕ್ಷಿಪ್ತ ಸುದ್ದಿಗಳಿಗಾಗಿ ನಮ್ಮ ʼಫೆಸ್ ಬುಕ್ ಪೇಜ್ʼ ಫಾಲೋ ಮಾಡಿ !