ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಹುನಗುಂದ: ಗುರು ಪೂರ್ಣಿಮೆ ಎಂದರೆ ಗುರುಗಳಿಗೆ ಶಿಷ್ಯ ದಕ್ಷಿಣೆ ಕೊಡುವದು ವಾಡಿಕೆ. ಆದರೆ ಜುಲೈ 05 ರಂದು ಗುರುಗಳು ತಮ್ಮ ಪ್ರೀತಿಯ ಶಿಷ್ಯನಿಗೆ ಕಾರು ಗಿಫ್ಟ್ ಕೊಟ್ಟಿದ್ದಾರೆ.
ಸುಮಾರು ಅರವತ್ತೇರಡು ವರ್ಷಗಳಿಂದ ನಿರಂತರ ಅನ್ನದಾಸೋಹ ಹಾಗೂ ಕಲಾ ಪೋಷಕ ಶ್ರೀಮಠವಾದ ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳ ಮಠದ ಧರ್ಮಾಧಿಕಾರಿಗಳಾದ ಶ್ರೀ ಡಾ.ಶಿವಾಕುಮಾರ ಮಹಾಸ್ವಾಮಿಗಳೇ ತಮ್ಮ ಶಿಷ್ಯನಿಗೆ ಕಾಣಿಕೆ ನೀಡಿದವರು.

ಸಿದ್ದಪ್ಪಜ್ಜನ ವಾಣಿಯಂತೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾನ್ನುಡಿಯಂತೆ, ಭಕ್ತರು ಶ್ರೀ ಮಠಕ್ಕೆ ನೀಡಿದ ಕಾಣಿಕೆಯಲ್ಲಿ ಮಠಕ್ಕೆ ಬೇಕಾಗುವಷ್ಟು ಕಾಣಿಕೆಯನ್ನು ಉಳಿಸಿಕೊಂಡು ಉಳಿದುದ್ದನ್ನು ಶ್ರೀ ಮಠದ ಭಕ್ತರಿಗೆ ಆಶೀರ್ವಾದದ ರೂಪದಲ್ಲಿ ನೀಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಸುತ್ತಾ, ಶ್ರೀಮಠದ ವತಿಯಿಂದ ಪ್ರತಿ ವರ್ಷ ತಮ್ಮ ಆತ್ಮೀಯ ಶಿಷ್ಯರಿಗೆ ಕಾಣಿಕೆ ನೀಡುವ ಸಂಪ್ರದಾಯವನ್ನು ಡಾ.ಶಿವಕುಮಾರ್ ಮಹಾಸ್ವಾಮಿಗಳು ಬೆಳೆಸಿಕೊಂಡು ಬಂದಿದ್ದಾರೆ . ಹೀಗಾಗಿ ಈ ವರ್ಷ ಬಾಗಲಕೋಟೆ ಜಿಲ್ಲೆಯ ಅಮಿನಗಡ ಹತ್ತಿರದ ಸೂಳೆಭಾವಿ ಗ್ರಾಮದ ತಮ್ಮ ಪರಮಶಿಷ್ಯನಾದ ಹಾಗೂ ಸ್ಯಾಂಡಲ್ ವುಡ್-ಬಾಲೀವುಡ್ ನಟರಾದ ಪ್ರವೀಣ ದಿಕ್ಷಿತ್ ಎನ್ನುವವರಿಗೆ ಟಾಟಾ ಕಂಪನಿಯ ಟಿಯಾಗೋ ಕಾರ್ ನ್ನು ಕಾಣಿಕೆಯಾಗಿ ನೀಡಿದ್ದಾರೆ.

ನಂತರ ಪ್ರವೀಣ ದಿಕ್ಷಿತ್ ಅವರು ಮಹಾತಪಸ್ವಿ ಶ್ರೀ ಸಿದ್ಧಪ್ಪಜ್ಜನ ಶ್ರೀಮಠಕ್ಕೆ ತಮಗೆ ಗುರು-ಕಾಣಿಕೆಯಾಗಿ ಬಂದ ಕಾರನ್ನು ಪೂಜೆ ಮಾಡುವುಸುವದರೋಂದಿಗೆ ಪೂಜ್ಯರಿಂದ ಕಾರಿನ ಕೀ ಯನ್ನು ಪಡೆದು ಧನ್ಯತಾ ಭಾವದೊಂದಿಗೆ ಆಶೀರ್ವಾದ ಪಡೆದುಕೊಂಡರು, ಈ ಸುಸಂದರ್ಭದಲ್ಲಿ ಶಿಷ್ಯನ ಮುಂದಿನ ಭವಿಷ್ಯಕ್ಕೆ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಶುಭಹಾರೈಸಿದರು.