ಹೊಸಪೇಟೆ (ವಿಜಯನಗರ): ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಯೋಗೋತ್ಸವ ಕಾರ್ಯಕ್ರಮಕ್ಕೆ ವಿಶ್ವಪ್ರಸಿದ್ಧ ಹಂಪಿಯಲ್ಲಿಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ವಿನಯ್ ಗುರೂಜಿ ಉಪಸ್ಥಿತರಿದ್ದರು. ಬಳಿಕ ವಚನಾನಂದ ಸ್ವಾಮೀಜಿ, ದೇಶದ 75 ಪ್ರವಾಸಿ ತಾಣಗಳಲ್ಲಿ ಯೋಗೋತ್ಸವ ಆಯೋಜಿಸಲಾಗುತ್ತಿದ್ದು, ಅದರ ಭಾಗವಾಗಿ ಹಂಪಿಯಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ಇದಕ್ಕೂ ಮುನ್ನ ಯೋಗ ಅಭಿಯಾನ ರಥಕ್ಕೆ ಸಚಿವ ಆನಂದ್ ಸಿಂಗ್, ವಿನಯ್ ಗುರೂಜಿ ಚಾಲನೆ ನೀಡಿದರು.