- ಮೂರನೇ ಹಂತದಲ್ಲಿ ಹೆಚ್ಚುವರಿ 55 ಜಿಲ್ಲೆಗಳನ್ನು ಕಡ್ಡಾಯ ಹಾಲ್ಮಾರ್ಕಿಂಗ್ ವ್ಯಾಪ್ತಿಗೆ ತರಲಾಗುವುದು.
ಚಿನ್ನದ ಆಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಹಾಲ್ಮಾರ್ಕಿಂಗ್ (ಮೂರನೇ ತಿದ್ದುಪಡಿ) ಆದೇಶ, 2023 ರ ಮೂಲಕ ಕಡ್ಡಾಯ ಹಾಲ್ಮಾರ್ಕಿಂಗ್ ನ ಮೂರನೇ ಹಂತವು ಸೆಪ್ಟೆಂಬರ್ 8, 2023 ರಿಂದ ಜಾರಿಗೆ ಬರುತ್ತದೆ.
ಕಡ್ಡಾಯ ಹಾಲ್ಮಾರ್ಕಿಂಗ್ ನ ಮೂರನೇ ಹಂತವು ಕಡ್ಡಾಯ ಹಾಲ್ಮಾರ್ಕಿಂಗ್ ವ್ಯವಸ್ಥೆಯಡಿ ಹೆಚ್ಚುವರಿ 55 ಹೊಸ ಜಿಲ್ಲೆಗಳನ್ನು ಒಳಗೊಳ್ಳುತ್ತದೆ, ಇದರಲ್ಲಿ ಕಡ್ಡಾಯ ಹಾಲ್ಮಾರ್ಕಿಂಗ್ ಆದೇಶದ ಎರಡನೇ ಹಂತದ ಅನುಷ್ಠಾನದ ನಂತರ ಹಾಲ್ಮಾರ್ಕಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ, ಇದರಿಂದಾಗಿ ಕಡ್ಡಾಯ ಹಾಲ್ಮಾರ್ಕಿಂಗ್ ಅಡಿಯಲ್ಲಿ ಬರುವ ಒಟ್ಟು ಜಿಲ್ಲೆಗಳ ಸಂಖ್ಯೆ 343 ಆಗಿದೆ. ಕಡ್ಡಾಯ ಹಾಲ್ಮಾರ್ಕಿಂಗ್ ಅಡಿಯಲ್ಲಿ ಹೊಸದಾಗಿ ಸೇರಿಸಲಾದ 55 ಜಿಲ್ಲೆಗಳ ರಾಜ್ಯವಾರು ಪಟ್ಟಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ವೆಬ್ಸೈಟ್ನಲ್ಲಿ ಲಭ್ಯವಿದೆ.
ಭಾರತ ಸರ್ಕಾರವು ಸೆಪ್ಟೆಂಬರ್ 8, 2023 ರಂದು ಆದೇಶವನ್ನು ಅಧಿಸೂಚನೆ ಹೊರಡಿಸಿದೆ.
ಬಿಐಎಸ್ 2021 ರ ಜೂನ್ 23 ರಿಂದ ಜಾರಿಗೆ ಬರುವಂತೆ ದೇಶದ 256 ಜಿಲ್ಲೆಗಳಲ್ಲಿ, ಮೊದಲ ಹಂತದಲ್ಲಿ ಮತ್ತು 04 ಏಪ್ರಿಲ್ 2022 ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 32 ಜಿಲ್ಲೆಗಳಲ್ಲಿ ಕಡ್ಡಾಯ ಹಾಲ್ಮಾರ್ಕಿಂಗ್ ಅನುಷ್ಠಾನದಲ್ಲಿ ಯಶಸ್ವಿಯಾಗಿದೆ, ಎರಡನೇ ಹಂತದಲ್ಲಿ ಪ್ರತಿದಿನ 4 ಲಕ್ಷಕ್ಕೂ ಹೆಚ್ಚು ಚಿನ್ನದ ವಸ್ತುಗಳನ್ನು ಎಚ್ಯುಐಡಿಯೊಂದಿಗೆ ಹಾಲ್ಮಾರ್ಕ್ ಮಾಡಲಾಗುತ್ತಿದೆ.
ಕಡ್ಡಾಯ ಹಾಲ್ಮಾರ್ಕಿಂಗ್ ಜಾರಿಗೆ ಬಂದ ನಂತರ, ನೋಂದಾಯಿತ ಆಭರಣ ವ್ಯಾಪಾರಿಗಳ ಸಂಖ್ಯೆ 34,647 ರಿಂದ 1,81,590 ಕ್ಕೆ ಏರಿದೆ, ಅಸ್ಸೇಯಿಂಗ್ ಮತ್ತು ಹಾಲ್ಮಾರ್ಕಿಂಗ್ ಕೇಂದ್ರಗಳು (ಎಎಚ್ಸಿ) 945 ರಿಂದ 1471 ಕ್ಕೆ ಏರಿದೆ. ಇದುವರೆಗೆ 26 ಕೋಟಿಗೂ ಹೆಚ್ಚು ಚಿನ್ನದ ಆಭರಣಗಳನ್ನು ಎಚ್ ಯುಐಡಿಯೊಂದಿಗೆ ಹಾಲ್ ಮಾರ್ಕ್ ಮಾಡಲಾಗಿದೆ.


ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದಾದ ಬಿಐಎಸ್ ಕೇರ್ ಅಪ್ಲಿಕೇಶನ್ನಲ್ಲಿ ‘ವೆರಿಫೈ ಎಚ್ಯುಐಡಿ’ ಬಳಸಿ ಖರೀದಿಸಿದ ಎಚ್ಯುಐಡಿ ಸಂಖ್ಯೆಯೊಂದಿಗೆ ಹಾಲ್ಮಾರ್ಕ್ ಚಿನ್ನದ ಆಭರಣಗಳ ಸತ್ಯಾಸತ್ಯತೆ ಮತ್ತು ಪರಿಶುದ್ಧತೆಯನ್ನು ಪರಿಶೀಲಿಸಲು ಗ್ರಾಹಕರನ್ನು ಪ್ರೋತ್ಸಾಹಿಸಲಾಗುತ್ತದೆ.
ಬಿಐಎಸ್ ಕೇರ್ ಅಪ್ಲಿಕೇಶನ್ ನ ಡೌನ್ಲೋಡ್ ಗಳ ಸಂಖ್ಯೆ 2021-22ರಲ್ಲಿ 2.3 ಲಕ್ಷದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 12.4 ಲಕ್ಷಕ್ಕೆ ಏರಿದೆ. ಇದಲ್ಲದೆ, ಕಳೆದ 2 ವರ್ಷಗಳ ಅವಧಿಯಲ್ಲಿ ಬಿಐಎಸ್ ಕೇರ್ ಅಪ್ಲಿಕೇಶನ್ ನಲ್ಲಿ ‘ವೆರಿಫೈ ಎಚ್ ಯುಐಡಿ’ ನ ಒಂದು ಕೋಟಿಗೂ ಹೆಚ್ಚು ಹಿಟ್ ಗಳನ್ನು ದಾಖಲಿಸಲಾಗಿದೆ.
_With the Inputs of PIB