ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಸಂತೆಕೆಲ್ಲೂರು ಗ್ರಾಮದ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದ ಅಡಿಯಲ್ಲಿ, ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ಕ್ಷಯರೋಗ ಕುರಿತು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಯರೋಗ ತಜ್ಞರಾದ ಮೋಯಿನ್ ರಾಯಚೂರು, “ಗ್ರಾಮದ ಜನರಲ್ಲಿ ನಿರಂತರ ದಿನಗಳ ಕೆಮ್ಮು ಇದ್ದರೆ ನಿರ್ಲಕ್ಷಿಸದೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಸಮಾನ್ಯ ಆರೋಗ್ಯ ತಪಾಸಣೆ ಹಾಗೂ ಕಫ ಪರೀಕ್ಷೆ ಸೇರಿದಂತೆ, ಚಿಕಿತ್ಸೆಗೆ ಒಳಪಡಲು ಸೂಚಿಸಬೇಕು” ಎಂದು ಮಾತನಾಡಿದ ಇವರು, ಆರೋಗ್ಯ ಸಿಬ್ಬಂದಿಗೆ, ಆಶಾ ಕಾರ್ಯಕರ್ತೆಯರಿಗೆ ಕ್ಷಯ ರೋಗ ಪ್ರಕಾರಗಳು ಎಷ್ಟು, ಚಿಕಿತ್ಸೆ ಪಡಿಯುವ ರೋಗಿಗೆ ನಿಕ್ಷಯ್ ಪೋಷಣ ಅಡಿಯಲ್ಲಿ ಆರ್ಥಿಕ ನೆರವು, ತಿಂಗಳಿಗೆ ಕ್ರಮವಾದ ಔಷದೋಪಚಾರ ಮಾಹಿತಿ, ದಿನಾಲು ಕ್ಷಯ ರೋಗಿಗೆ ಆಶಾ ಕಾರ್ಯಕರ್ತೆಯರು ಮಾತ್ರೆ ನೀಡಬೇಕು, ಕ್ಷಯರೋಗಿಗೆ ಕ್ರಮವಾದ ಮಾತ್ರೆಗಳ ನೀಡುವಿಕೆ, ಅವಧಿಯ ಅನುಸರಣೆ ಹಾಗೂ ಪಾಲನೆ ಕುರಿತು, ಇದಕ್ಕೆ ಒಟ್ಟು ಆರು ತಿಂಗಳು ಚಿಕಿತ್ಸೆ ನೀಡಲಾಗುತ್ತದೆ, ಕ್ಷಯರೋಗಕ್ಕೆ ಸಂಪೂರ್ಣವಾಗಿ ಆರು ತಿಂಗಳು ಚಿಕಿತ್ಸೆ ನೀಡಿದ ಆಶಾ ಕಾರ್ಯಕರ್ತೆಯರಿಗೆ ರೂ. ಒಂದು ಸಾವಿರದಷ್ಟು ಪ್ರತ್ಸಾಹ ಧನ ನೀಡಲಾಗುತ್ತಿದೆ ಎಂಬ ಸುಧೀರ್ಘವಾದ ಹತ್ತು ಹಲವಾರು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಶ್ರೀದೇವಿ ಹಿರೇಮಠ, ಕ್ಷಯ ರೋಗ ವಿಭಾಗದ ರವೀಂದ್ರ ಮತ್ತು ಆರೋಗ್ಯ ಸಿಬ್ಬಂದಿ ಸಹೋದರಿಯರು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೋಂಡಿದ್ದರು.