ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಮೈಸೂರು ಎಚ್.ಡಿ. ಕೋಟೆಯಿಂದ ಸಂತೆಕೆಲ್ಲೂರು ಗ್ರಾಮಕ್ಕೆ ಬಂದ ಒಬ್ಬರನ್ನು ಆಡಳಿತ ಹಾಗೂ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಡೆ ಸೂಚನೆ ಮೇರೆಗೆ ಮಂಜಾಗ್ರತಾ ಕ್ರಮವಾಗಿ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಆತನಿಗೆ ಎಚ್. ಡಿ. ಕೋಟೆಯಲ್ಲಿಯೇ ಕೋವಿಡ್-19 ಪರೀಕ್ಷಿಸಲಾಗಿ ನೆಗಟಿವ್ ಬಂದಿದೆ, ಸಂತೆಕೆಲ್ಲೂರಿನಲ್ಲಿ ಮಂಜಾಗ್ರತಾ ಕ್ರಮಕ್ಕಾಗಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮನೆಯಲ್ಲಿ ಇರಬೇಕಾದ ರೀತಿ ಹಾಗೂ ಆಹಾರ ಪದ್ಧತಿ ತಿಳಿಸಿ, ಆರೋಗ್ಯ ಇಲಾಖೆಯ ಹೋಮ್ ಕ್ವಾರೈಂಟೈನ್ ಬಿತ್ತಿಪತ್ರವನ್ನು ಆತನ ಮನೆಯ ಬಾಗಿಲಿಗೆ ಅಂಟಿಸಿ, ಕೆಮ್ಮು-ಶೀತ-ಉಸಿರಾಟದ ತೊಂದರೆ ಸೇರಿದಂತೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಭೇಟಿ ನೀಡಿ ಅಥವಾ ಸೂಚಿತ ಸಹಾಯವಾಣಿಗೆ ಸಂಪರ್ಕಿಸಿ ಎಂದು ಸೂಚಿಸಲಾಗಿದೆ, ಈ ಕಾರ್ಯದಲ್ಲಿ ಆಶಾ ಕಾರ್ಯಕರ್ತೆಯರಾದ ಪಾರ್ವತಿ ಬಡಿಗೇರ್ ಹಾಗೂ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.